Malenadu Mitra
ರಾಜ್ಯ ಶಿವಮೊಗ್ಗ

ಅಗೆದಷ್ಟೂ ಆಳವಾಗುತ್ತಿರುವ ಹುಣಸೋಡು ಸ್ಫೋಟ, ಕ್ವಾರಿ ಆರಂಭಕ್ಕೆ ರಾಜಕೀಯ ಒತ್ತಡ

ಶಿವಮೊಗ್ಗದಲ್ಲಿ ನಡೆದ ಮಹಾಸ್ಫೋಟ ಜನಮಾನಸದಲ್ಲಿ ಹಸಿರಾಗಿರುವಾಗಲೇ ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಗ್ರಾಮದ ಅಕ್ರಮ ಕಲ್ಲುಗಣಿಯಲ್ಲಿ ನಡೆದ ಸ್ಫೋಟದಲ್ಲಿ ಆರು ಮಂದಿ ಮೃತರಾಗಿದ್ದಾರೆ. ಇದರಿಂದ ಅಕ್ರಮ ಕಲ್ಲುಗಣಿ ನಿಲ್ಲಿಸಿ ಎಂಬ ಮುಖ್ಯಮಂತ್ರಿಗಳ ಆದೇಶಕ್ಕೆ ಅಧಿಕಾರಶಾಹಿ ಎಷ್ಟು ಕಿಮ್ಮತ್ತು ನೀಡಿದೆ ಎಂಬುದು ಬಹಿರಂಗವಾಗಿದೆ. ಶಿವಮೊಗ್ಗದಲ್ಲಿ ನಡೆದಿದ್ದ ದುರಂತದ ಮರುದಿನವೇ ರಾಜ್ಯದ ಎಲ್ಲಾ ಅಕ್ರಮ ಕಲ್ಲುಕ್ವಾರಿಗಳನ್ನು ಬಂದ್ ಮಾಡಲು ಆದೇಶ ನೀಡಿರುವಾಗಿ ಮುಖುಮಂತ್ರಿ ಹೇಳಿದ್ದರು. ಮುಖ್ಯಮಂತ್ರಿಯವರ ಆದೇಶ ಜಾರಿಯಾಗಿದ್ದೇ ಆದರೆ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಸ್ಫೋಟ ಹೇಗೆ ಸಂಭವಿಸಿತು ಎಂಬ ಪ್ರಶ್ನೆ ಜನರದ್ದಾಗಿದೆ.
ಹುಣಸೋಡಲ್ಲಿ ಸಾವಿನ ಸಂಖ್ಯೆ ಅಧಿಕ:
ಹುಣಸೋಡು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ೬ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಒಂದು ಮೂಲದ ಪ್ರಕಾರ ಮೂರು ಜಿಲ್ಲೆಗಳನ್ನು ಬೆಚ್ಚಿ ಬೀಳಿಸಿದ್ದ ಮಹಾಸ್ಫೋಟದಲ್ಲಿ ೬ಕ್ಕಿಂತ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಘೋಷಿತ ಆರು ಮಂದಿಯಲ್ಲಿ ಐದು ಮಂದಿ ಗುರುತು ಪತ್ತೆಮಾಡಿದ್ದು, ಇನ್ನೊಂದು ದೇಹ ಯಾರದ್ದು ಎಂಬ ಮಾಹಿತಿ ಗೊತ್ತಾಗಿಲ್ಲ.ಕ್ವಾರಿಯಲ್ಲಿಅಂದುಸ್ಫೋಟಕಸಾಗಣೆಗೆಆರುಮಂದಿಬಂದಿದ್ದರೆ,ಈಗಾಗಲೇಐದುಜನರಗುರುತುಪತ್ತೆಯಾಗಿದೆ.ಉಳಿದ ಇನ್ನೊಬ್ಬಯಾರೆಂದೂಹೇಳಲು ಯಾವ ವಿಜ್ಞಾನವನ್ನೂ ಓದುವಅಗತ್ಯವಿಲ್ಲ. ಆದರೆ ಹುಣಸೋಡು ಸ್ಫೋಟಎಂಬಘಟನೆ ಸುತ್ತಬರೀ ಗೋಜಲು-ಗೋಜಲೇ ತುಂಬಿಕೊಂಡಿದೆ.ಮಹಾಸ್ಫೋಟದಲ್ಲಿ ಈಗಾಗಲೇ ಸಿಕ್ಕದೇಹಗಳು ಛಿದ್ರವಾಗಿದ್ದವು.ಟನ್‌ಗಟ್ಟಲೆ ಸ್ಫೋಟಕಸಿಡಿದಿದ್ದರಿಂದ ಮತ್ತಷ್ಟು ದೇಹಗಳುಬೂದಿಯಾಗಿರುವಬಗ್ಗೆಯೂ ಅನುಮಾನವಿದೆ.
ಸುಟ್ಟವಾಹನ ಎರಡಲ್ಲ ಮೂರು:
ಮಹಾಸ್ಫೋಟ ಸ್ಥಳದಲ್ಲಿ ಒಂದು ಕ್ಯಾಂಟರ್ ಹಾಗೂ ಮತ್ತೊಂದು ಸ್ಕಾರ್ಪಿಯೊ ವಾಹನ ಸುಟ್ಟು ಭಸ್ಮವಾಗಿವೆ ಎಂದು ಹೇಳಲಾಗಿತ್ತು.ಆದರೆ ಪ್ರಕರಣದ ಮುಂದುವರಿದ ತನಿಖೆಯಲ್ಲಿ ಮತ್ತೊಂದು ಮಹಿಂದ್ರಾಪಿಕಪ್ವಾಹನವೂಸುಟ್ಟುಹೋಗಿರುವುದಾಗಿ ಗೊತ್ತಾಗಿದೆ.ಈ ಮೂರೂ ವಾಹನಗಳಲ್ಲಿಎಷ್ಟು ಜನಬಂದಿದ್ದರು.ಅದರಲ್ಲಿಉಳಿದವರುಎಷ್ಟುಎಂಬ ಬಗ್ಗೆ ಇಲಾಖೆಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಿಲ್ಲ. ಸ್ಥಳದಲ್ಲಿ ಸಿಕ್ಕ ದೇಹದ ಚೂರುಗಳನ್ನೇ ಕೊಂಡೊಯ್ದು ಡಿಎನ್‌ಎ ಪರೀಕ್ಷೆ ಮಾಡಲಾಗಿದೆ. ಸ್ಥಳ ವೀಕ್ಷಣೆಗೆ ಮಾದ್ಯಮದವರಿಗೆ ಮುಕ್ತ ಅವಕಾಶ ನೀಡಿಲ್ಲ. ಹೀಗಿರುವಾಗ ಗಣಿ ಕುಳಿಯಲ್ಲಿ ಇನ್ನೆಷ್ಟು ಸತ್ಯಗಳು ನಾಶವಾಗಿವೆಯೊ ಯಾರಿಗೆ ಗೊತ್ತು ?
ಸ್ಫೋಟಕ ತಯಾರಿಕರ ಮೇಲೇಕೆ ಕ್ರಮವಿಲ್ಲ:
ಹುಣಸೋಡು ಸ್ಫೋಟ ಪ್ರಕರಣದಲ್ಲಿ ಈವರೆಗೆ ೧೦ ಆರೋಪಿಗಳನ್ನು ಬಂಧಿಸಲಾಗಿದೆ. ಆಂಧ್ರದಿಂದ ಸೆರೆಹಿಡಿದು ತಂದವರಲ್ಲಿ ಎಲ್ಲರೂ ಸ್ಪೋಟಕ ಪೂರೈಕೆದಾರರೆ ಹೊರತು ತಯಾರಿಕರಲ್ಲ. ಸ್ಫೋಟಕ ತಯಾರಿಕೆಗೆ ಪರವಾನಗಿ ಹೊಂದಿರುವ ಮಾಲೀಕರು ಸಾಗಣೆ ಮತ್ತು ಸಂಗ್ರಹಕ್ಕೆ ಅನುಮತಿ ಇಲ್ಲದವರಿಗೆ ಸ್ಫೋಟಕ ಪೂರೈಕೆ ಮಾಡಿರುವುದು ಕಾನೂನಿನ ಉಲ್ಲಂಘನೆಯಾಗಿದ್ದು ಅಂತಹ ವ್ಯಕ್ತಿಗಳನ್ನು ಈವರೆಗೂ ಬಂಧಿಸಿಲ್ಲ. ಚಿಕ್ಕಬಳ್ಳಾಪುರ ಕ್ವಾರಿಗಳಿಗೂ ಆಂಧ್ರದಿಂದಲೇ ಸ್ಪೋಟಕ ಪೂರೈಕೆ ಆಗುತಿತ್ತು ಎನ್ನಲಾಗಿದ್ದು, ಪರವಾನಗಿ ಇಲ್ಲದ ವ್ಯಕ್ತಿಗಳಿಗೆ ಮಾರಾಟ ಮಾಡುವ ಅಧಿಕೃತ ಸ್ಫೋಟಕ ತಯಾರಿಕರನ್ನು ತನಿಖೆಗೊಳಪಡಿಸಿದರೆ, ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಕ್ವಾರಿಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಬಹುದು ಎಂಬುದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.

ಜನಪ್ರತಿನಿಧಿಗಳ ವಕಾಲತು:
ಜಿಲ್ಲೆಯಲ್ಲಿ ಅನಧಿಕೃತ ಕ್ವಾರಿಗಳಿಗೆ ಮಾತ್ರ ನಿರ್ಬಂಧ ಹೇರಿದ್ದು, ಅಧಿಕೃತ ಕ್ವಾರಿಗಳಿಗೆ ಯಾವುದೇ ಅಡ್ಡಿಗಳಿಲ್ಲ. ಆದರೆ ಅಕ್ರಮ ಕ್ವಾರಿಗಳಿಂದ ಮಾತ್ರ ಜಿಲ್ಲೆಯ ಅಭಿವೃದ್ಧಿ ಎಂಬಂತೆ ಜನಪ್ರತಿನಿಧಿಗಳು ಹುಯಿಲೆಬ್ಬಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ-ಕಲ್ಲು ಬೇಕು. ಆದರೆ ಅವು ಅಕ್ರಮ ಕ್ವಾರಿಗಳಿಂದಲೇ ಪೂರೈಕೆ ಆಗಬೇಕೆಂದೇನಿಲ್ಲ. ಸರಕಾರ ಗಣಿಗಾರಿಕೆ ಮತ್ತು ಸ್ಫೋಟಕ ಪೂರೈಕೆ, ಸುರಕ್ಷತೆಗೆ ಒಂದು ಕಾನೂನು ಜಾರಿ ಮಾಡಬೇಕು. ಅಕ್ರಮ ಕ್ವಾರಿಗಳನ್ನೇ ಹುಲ್ಲುಗಾವಲು ಮಾಡಿಕೊಂಡಿರುವ ಗಣಿಮತ್ತು ಭೂ ವಿಜ್ಞಾನ ಇಲಾಖೆಯನ್ನು ಹೊಣೆಯಾಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಅಧಿಕಾರಿಗಳ ರಕ್ಷಣೆ

ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣವನ್ನು ತಕ್ಷಣ ಸಿಐಡಿ ತನಿಖೆಗೊಪ್ಪಿಸಿರುವ ಸರಕಾರ ಶಿವಮೊಗ್ಗ ಪ್ರಕರಣದಲ್ಲಿ ಮಾತ್ರ ಮುಲಾಜಿಗೊಳಗಾದಂತೆ ಕಾಣುತ್ತದೆ. ಘಟನೆ ನಡೆದ ದಿನವೇ ಉಸ್ತುವಾರಿ ಸಚಿವರು ಕ್ರಷರ್ ಸಕ್ರಮ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಗಣಿ ಸಚಿವರು ಉನ್ನತ ಮಟ್ಟದ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದಿದ್ದು, ಕೇವಲ ಹೇಳಿಕೆಯಾಗಿ ಈಗ ಮರೆತುಹೋಗಿದೆ. ವಿಧಾನ ಸಭೆಯಲ್ಲಿ ಪ್ರತಿಪಕ್ಷ ನಾಯಕರು ಮಾಡಿದ ಒತ್ತಾಯ ದಾಖಲೆಗಷ್ಟೇ ಸೇರಿದೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಲಿಖಿತ ದೂರು ನೀಡಿದ್ದರೂ ಕ್ರಮವಾಗುವ ಲಕ್ಷಣಗಳಂತೂ ಕಾಣುತಿಲ್ಲ.

Ad Widget

Related posts

ಸಿಗಂದೂರು ಚೌಡಮ್ಮ ದೇವಿ ಜಾತ್ರೆ ಆರಂಭ, ಭಕ್ತಿಪರವಶರಾದ ಭಕ್ತರು
ಹರಿದು ಬಂದ ಭಕ್ತಸಾಗರ, ಜನಮನಗೆದ್ದ ಜಾನಪದ ಕಲಾತಂಡಗಳು

Malenadu Mirror Desk

ಹಂದಿ ಅಣ್ಣಿ ಮೇಲೆ ಸೇಡಿದ್ದವರ ಸಿಂಡಿಕೇಟ್ ನಿಂದಲೇ ಕೊಲೆ, ಶತ್ರುವಿನ ಶತ್ರುಗಳೆಲ್ಲ ಒಂದಾಗಿ ಅಟ್ಯಾಕ್ ಮಾಡಿದ್ದಾರೆಂಬುದು ಪೊಲೀಸರ ಅನುಮಾನ

Malenadu Mirror Desk

ಅಗಲಿದ ರಾಜರತ್ನ,ತೀವ್ರ ಹೃದಯಾಘಾತದಿಂದ ಪುನೀತ್‌ರಾಜ್‌ಕುಮಾರ್ ನಿಧನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.