ಹುಣಸೋಡು ಮಹಾಸ್ಫೋಟದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳಾದ ಬಿ.ವಿ.ಸುಧಾಕರ್,ಎಸ್.ಟಿ.ಕುಲಕರ್ಣಿ ಮತ್ತು ಅವಿನಾಶ್ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ.
ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಾಫ ಹುಸೇನ್ ಸೈಯದ್ ಅಜೀಜ್ ಅವರು ಈ ಆದೇಶ ನೀಡಿದ್ದಾರೆ.
ಹುಣಸೋಡು ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಕ್ರಷರ್ ಮಾಲೀಕ ಸುಧಾಕರ್ ಹಾಗೂ ಭೂಮಿಯ ಮಾಲೀಕರಾದ ಕುಲಕರ್ಣಿ ಅವರನ್ನು ಬಂಧಿಸಿತ್ತು. ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಕಲೆ ಹಾಕಿದ ಸಾಕ್ಷಿಗಳ ಮೇಲೆ ವಾದ ಮಂಡನೆ ಮಾಡಿದ್ದ ಸರಕಾರಿ ಅಭಿಯೋಜಕಿ ಪಿ.ಒ.ಪುಷ್ಪಾ ಅವರು ಆರೋಪಿಗಳಿಗೆ ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದರು.
ಜನವರಿ ೨೧ ರಂದು ಹುಣಸೋಡು ಎಸ್‌ಎಸ್ ಕ್ರಷರ್‌ನಲ್ಲಿ ಸಂಭವಿಸಿದ್ದ ಜಿಲೆಟಿನ್ ಸ್ಫೋಟದಲ್ಲಿ ಆರು ಮಂದಿ ಸಾವಿಗೀಡಾಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದ್ದಲ್ಲದೆ, ದೇಶಮಟ್ಟದಲ್ಲಿ ಈ ಮಹಾಸ್ಫೋಟ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.
previous post
next post