ಮಹಾನಗರಗಳಿಗೆ ನೀರು ಪೂರೈಸಲು ಸರಕಾರ ಅರ್ಥವಿಲ್ಲದ ನೀರಾವರಿ ಯೋಜನೆಗಳನ್ನು ರೂಪಿಸುವ ಬದಲಿಗೆ ಮಳೆಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಮನ್ವಯ ವೇದಿಕೆ ಸೊರಬ ಅಧ್ಯಕ್ಷ ಎಸ್.ಎಂ.ನೀಲೇಶ್ ಹೆಳಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಮನ್ವಯ ವೇದಿಕೆ ಸೊರಬ, ನೇಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಯುವ ಒಕ್ಕೂಟ ಸಾಗರ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಳೆ ನೀರು ಇಂಗಿಸೋಣ ಜಲಸಾಕ್ಷರರಾಗೋಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೆಲ-ಜಲದ ವಿಷಯದಲ್ಲಿ ರಾಜಕಾರಣ ಸಲ್ಲದು. ನಗರಗಳಿಗೆ ನೀರು ಪೂರೈಸುವ ಸಲುವಾಗಿ ಜನಸಾಮಾನ್ಯರ ಬದುಕು ಹಾಗೂ ಪ್ರಕೃತಿಗೆ ಅಡ್ಡಿಯಾಗುವ ಯಾವುದೇ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು. ನೀರಾವರಿ ಯೋಜನೆಗಳಿಗೆ ಮೀಸಲಿಡುವ ಅನುದಾನದಲ್ಲಿ ಅರ್ಧದಷ್ಟು ಅನುದಾನ ಬಳಸಿ ಮಳೆಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಲ್ಲಿ ಶಾಶ್ವತ ನೀರು ಒದಗಿಸಬಹುದು. ಕೆರೆಗಳನ್ನು ಹೂಳೆತ್ತುವ ಮೂಲಕ, ಬೀಳು ಪ್ರದೇಶ ಹಾಗೂ ಜಮೀನುಗಳಲ್ಲಿ ಹೆಚ್ಚು ಇಂಗುಗುಂಡಿಗಳನ್ನು ತೆಗೆಯುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜಾಗ್‌ವೆಲ್ ಬಾವಿಗಳನ್ನು ನಿರ್ಮಿಸಲು ಒತ್ತು ನೀಡಬೇಕು ಎಂದರು.
ಸಾಗರ ಯುವ ಒಕ್ಕೂಟದ ಅಧ್ಯಕ್ಷೆ ಪುಷ್ಪಲತಾ ಉಪನ್ಯಾಸ ನೀಡಿ, ಪ್ರಕೃತಿ ಎಂಬುದು ನಮ್ಮ ಹಿರಿಯಲು ನಮಗೆ ಕೊಟ್ಟ ಸಾಲವಾಗಿದ್ದು ಸಂರಕ್ಷಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ನೀಡಬೇಕು. ಶಾಲೆ, ಮನೆ ಸುತ್ತಲು ಉತ್ತಮ ಪರಿಸರ ನಿರ್ಮಿಸುವ ಜವಬ್ದಾರಿ ಮಕ್ಕಳ ಮೇಲಿದೆ. ನೀರಿನ ಅಬಾವ ಹೆಚ್ಚಿದ್ದು, ಮಿತನೀರು ಬಳಕೆಗೆ ಒತ್ತು ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಮಳೆಕೊಯ್ಲು ವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದರು.
ಪ್ರಾಂಶುಪಾಲರಾದ ಸಿಸ್ಟರ್ ಪ್ರೀತಿ ಫರ್ನಾಂಡೀಸ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಸ್ವಾತಿ ಸ್ವಾಗತಿಸಿ, ಅನಿಲ್ ವಂದಿಸಿ, ಪ್ರಜ್ವಲ್ ಚಂದ್ರಗುತ್ತಿ ನಿರೂಪಿಸಿದರು.
ಕಾಲೇಜಿನ ಆಡಳಿತಾಧಿಕಾರಿ ಎಂ.ಕೆ. ಮಂಜಪ್ಪ, ಉಪನ್ಯಾಸಕ ವೆಂಕಟೇಶ್, ಪ್ರತಿನಿಧಿಗಳಾದ ಮೇಘನಾ, ಗೀತಾ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
previous post
next post
1 comment
super sir