ಶಿವಮೊಗ್ಗದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿರುವ ಶ್ರೀ ಮಾರುತಿ ಪ್ರತಿಷ್ಠಾನಂನ ಉದ್ದೇಶಿತ ಯಾಗಶಾಲೆ ಮತ್ತು ಭೋಜನಾಲಯದ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರವೇರಿಸಿದ್ದಾರೆ. ಬೆಳ್ಳಿ ಇಟ್ಟಿಗೆ ಸಮರ್ಪಣೆಯೊಂದಿಗೆ ಸಿಎಂ ಪೂಜೆಗೆ ಚಾಲನೆ ನೀಡಿದರು. ಸಚಿವ ಕೆ.ಎಸ್.ಈಶ್ವರಪ್ಪ ಅವರು, ಬೆಳ್ಳಿ ಯಂತ್ರ ಸಮರ್ಪಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ದೇಗುಲ ಸಂಚಾಲಕ ಸುರೇಶ್ ಕೆ ಬಾಳೆಗುಂಡಿ ಹಾಗೂ ಧರ್ಮದರ್ಶಿ ರವೀಂದ್ರಭಟ್ ಕುಟುಂಬದವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಶತರುದ್ರಯಾಗದ ಮೂಲಕ ಮುಖ್ಯಮಂತ್ರಿ ಅವರನ್ನು ಋತ್ವಿಜರು ಆಶೀರ್ವದಿಸಿದರು. ಈ ಸಂದರ್ಭ ಮುಖ್ಯ ಅವರಿಗೆ ಸ್ಫಟಿಕದ ಹಾರ ಹಾಕಿ ಗೌರವಿಸಲಾಯಿತು.ಈ ಸಂದರ್ಭ ಸಚಿವರಾದ ಬೈರತಿ ಬಸವರಾಜ್, ಶಾಸಕ ಆರಗ ಜ್ಞಾನೇಂದ್ರ ಮತ್ತಿತರರಿದ್ದರು.
previous post
next post