Malenadu Mitra
ರಾಜ್ಯ ಶಿವಮೊಗ್ಗ

ಕಾಡಾನೆ ನಿಯಂತ್ರಣಕ್ಕೆ ಕ್ರಮ

ಉಂಬ್ಳೇಬೈಲು _ ಕಡೇಕಲ್ಲು ಯರಗನಾಳ್ ಭಾಗದಲ್ಲಿ ಕೃಷಿ ಭೂಮಿ ಹಾಗೂ ವಾಸ ಸ್ಥಳಕ್ಕೆ ದಾಳಿ ಇಡುತ್ತಿರುವ  ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದರು.
 ಅರಣ್ಯ ಕೋಠಿಯಲ್ಲಿ  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬಂದ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು

ಗ್ರಾಮಗಳಲ್ಲಿ ಈಗಾಗಲೇ ಸಾಕಾನೆಬಳಸಿಕಾಡಾನೆಹಿಮ್ಮೆಟ್ಟಿಸುವಕಾರ್ಯಾಚರಣೆನಡೆಸಲಾಗಿದೆ.ಅದರಲ್ಲಿಯಶಸ್ವಿಯಾಗಿದ್ದೇವೆ.ಕಾಡಾನೆಪುನಃಬಾರದಂತೆಕ್ಯಾಂಪ್ ಆನೆಗಳನ್ನುನಿಯೋಜಿಸಲಾಗಿದೆ.ಭದ್ರಾಅಭಯಾರಣ್ಯದಲ್ಲಿ೩೩ಕಿಲೋಮೀಟರುದ್ದದಕಂದಕತೋಡಲುಸರಕಾರಕ್ಕೆಪ್ರಸ್ತಾವನೆಕಳಿಸಲಾಗಿದೆ.ಅನುಮತಿಸಿಕ್ಕಬಳಿಕಕೆಲಸಆರಂಭಿಸಲಾಗುವುದುಎಂದುಹೇಳಿದರು.
ಬೆಳೆಹಾನಿ ಪರಿಹಾರಕ್ಕೆ ಸರ್ಕಾರಕ್ಕೆ ಬದ್ಧವಾಗಿದೆ. ಭತ್ತ, ಹಾಗೂ ಇತರೆ ಕಾಳು ಬೆಳೆಗಳಿಗೆ ವಿವಿಧ ದರವನ್ನ ನಿಗದಿಪಡಿಸಲಾಗಿದೆ. ಮಲೆನಾಡು  ಭಾಗದ ಎಲ್ಲಾ ಶಾಸಕರು ಸಭೆ ನಡೆಸಿ ಅರಣ್ಯ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ಅದರಂತೆ ಪರಿಹಾರ ನೀಡಲು ಸರ್ಕಾರವೂ ಸಹ ಬದ್ಧವಾಗಿದೆ.

ಈ ಭಾಗದಲ್ಲಿ ಸುಮಾರು ೧೫೦ ಜನರಿಗೆ ಕಾಡಾನೆ ದಾಳಿಯಿಂದ ಬೆಳೆ ನಷ್ಟ ಪರಿಹಾರಕ್ಕಾಗಿ ಅರ್ಜಿಸಲ್ಲಿಸಿದ್ದರು. ಪರಿಹಾರ ದೊರೆತಿರಲಿಲ್ಲ. ಈಗ  ೭ ಲಕ್ಷ ಹಣ ಪರಿಹಾರ ಬಂದಿದೆ. ಆನ್ ಲೈನ್ ಮೂಲಕ ನೇರವಾಗಿ ಸಂತ್ರಸ್ತ  ರೈತರ ಬ್ಯಾಂಕ್ ಖಾತೆಗೆ ಹಣ ಹೋಗಲಿದೆ ಎಂದರು.  ಆದರೆ ಈ ಭಾಗದಲ್ಲಿ ಆನೆಗಳು ಬಾರದಂತೆ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆನೆಗಳು ಯಾಕೆ ಗ್ರಾಮಗಳಿಗೆ ಬರುತ್ತಿವೆ ಎಂಬುದರ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು. ಪ್ರಜಾ ಸ್ಪಂದನೆ ಸಾಮಾಜಿಕ ಸಂಘಟನೆ ಮುಖಂಡ ದುಗ್ಗಪ್ಪ ಗೌಡ ,ಕಲಗೋಡು ರತ್ನಾಕರ, ವಿಜಯಕುಮಾರ್, ಮುಡುಬ ರಾಘವೇಂದ್ರ ಮತ್ತಿತರಿದ್ದರು.

Ad Widget

Related posts

ಪ್ರಚಾರ ಸಭೆಯ ಜನ ನೋಡಿ ಕಾಂಗ್ರೆಸ್ ನಿಬ್ಬೆರಗಾಗಿದೆ: ಬಿ. ಎಸ್. ಯಡಿಯೂರಪ್ಪ

Malenadu Mirror Desk

ಹಸಿದವರಿಗೆ ಅನ್ನ ನೀಡುವುದು ನಮ್ಮ ಸರಕಾರದ ದ್ಯೇಯ ,ಯುವನಿಧಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Malenadu Mirror Desk

ಗೃಹಸಚಿವರ ಸ್ವಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ: ಅಕ್ರಮ ಗೋ ಸಾಗಣೆ ವಿರುದ್ಧ ಬೃಹತ್ ಪ್ರತಿಭಟನೆ ,ರಸ್ತೆ ತಡೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.