ಸಾಗರ-ಹೊಸನಗರ ಕ್ಷೇತ್ರ ಶಾಸಕರು ಹಾಗೂ ಎಂಎಸ್‌ಎಲ್‌ಐ ಅಧ್ಯಕ್ಷರೂ ಆದ ಹರತಾಳು ಹಾಲಪ್ಪ ಅವರ ಜನ್ಮದಿನಾಚರಣೆಯನ್ನು ಅವರ ಅಭಿಮಾನಿಗಳು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಊರುಗಳಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ತಮ್ಮ ನೆಚ್ಚಿನ ನಾಯಕನಿಗೆ ಆಯುರಾರೋಗ್ಯ ಹಾಗೂ ರಾಜಕೀಯ ಯಶಸ್ಸು ಕೋರಿ ಪ್ರಾರ್ಥನೆ ಮಾಡಿದ್ದಾರೆ.
ಹೊಸನಗರ ರಾಮಚಂದ್ರಾಪುರ ಮಠದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಹೊಸನಗರ ಭಾಗದ ಅಭಿಮಾನಿಗಳು ಶ್ರೀ ಮಠದ ಗೋ ಶಾಲೆಗೆ ಮೇವು ಕೊಟ್ಟಿದ್ದಾರೆ ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಎಂಸಿಎ ನಿರ್ದೇಶಕ ಎಚ್.ಆರ್.ತೀರ್ಥೇಶ್, ಮೋಹನ್ ಮಂಡಾನಿ, ಮನೋಹರ, ಗುರುರಾಜ, ಬಸವರಾಜ್, ಚಾಳುಕ್ಯ ಮತ್ತಿತರಿದ್ದರು. ಅರಲುಗೋಡಿನಲ್ಲಿ ಗ್ರಾಮಸ್ಥರು ಅಲ್ಲಿನ ದೇವಾಲಯದಲ್ಲಿ ಹಾಲಪ್ಪರ ಜನ್ಮದಿನ ಅಂಗವಾಗಿ ಪೂಜೆ ಸಲ್ಲಿಸಲಾಯಿತು.
ಸಾಗರದಲ್ಲೂ ಹಾಲಪ್ಪ ಬೆಂಬಲಿಗರು ಹಾಗೂ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಬೆಂಗಳೂರಿನಲ್ಲಿರುವ ಹಾಲಪ್ಪ ಅವರನ್ನು ಭೇಟಿ ಮಾಡಿದ ಬೆಂಬಲಿಗರೂ ಹಿತೈಷಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದರು. ಹಾಲಪ್ಪ ದಂಪತಿ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿರುವ ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
previous post