Malenadu Mitra
ರಾಜ್ಯ ಶಿವಮೊಗ್ಗ

ಕಲೆಯ ಮೂಲಕ ಮಕ್ಕಳಲ್ಲಿ ಉತ್ತಮ ಪ್ರವೃತ್ತಿ: ಎಂ.ಎಲ್.ವೈಶಾಲಿ

ರಂಗಭೂಮಿ ಸೇರಿದಂತೆ ಯಾವುದೇ ಕಲೆಗಳಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಮೂಲಕ ಅವರಲ್ಲಿ ಉತ್ತಮ ಪ್ರವೃತ್ತಿ ಬೆಳೆಸಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ತಿಳಿಸಿದರು.ಅವರು ಮಂಗಳವಾರ ರಂಗಾಯಣದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಮಹಿಳಾ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು

ನಾಟಕ, ಸಂಗೀತ, ನೃತ್ಯ ಸೇರಿದಂತೆ ಯಾವುದೇ ಕಲೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರು ತಪ್ಪು ಹಾದಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಓದಿನೊಂದಿಗೆ ರಂಗಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಲ್ಲಿ ರಚನಾತ್ಮಕವಾದ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಬೇಕು. ಮಹಿಳಾ ರಂಗೋತ್ಸವ ಕಾರ್ಯಕ್ರಮದ ಮೂಲಕ ಸ್ತ್ರೀಯನ್ನು ವಿವಿಧ ಆಯಾಮಗಳಲ್ಲಿ ಅರಿತುಕೊಳ್ಳಲು ರಂಗಾಯಣ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಕಾಂತೇಶ ಅವರು ಮಾತನಾಡಿ, ನಾಟಕಗಳು ಸಮಾಜವನ್ನು ವಿವಿಧ ಆಯಾಮಗಳಲ್ಲಿ ಅರಿತುಕೊಳ್ಳಲು ನೆರವಾಗುತ್ತದೆ. ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿರುವ ಮಹಿಳಾ ರಂಗೋತ್ಸವ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನವಾಗಿದೆ ಎಂದರು.

ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಲ್ಕು ದಿನಗಳ ಕಾಲ ನಡೆದ ರಂಗೋತ್ಸವಕ್ಕೆ ಶಿವಮೊಗ್ಗ ಜನತೆ ಉತ್ತಮ ಪ್ರೋತ್ಸಾಹ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಪೂರ್ತಿಯಾಗಿದೆ ಎಂದರು.

ರಂಗಸಮಾಜ ಸದಸ್ಯ ಹಾಲಸ್ವಾಮಿ ಅವರು ಮಾತನಾಡಿ ನಾಲ್ಕು ದಿನಗಳ ಕಾಲ ಜೀವನ್ಮುಖಿ ಹೆಸರಿನಲ್ಲಿ ವೈವಿಧ್ಯಮಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮಹಿಳೆಯರ ವಿವಿಧ ಆಯಾಮಗಳನ್ನು ರಂಗದ ಮೇಲೆ ಅನಾವರಣಗೊಳಿಸಲಾಗಿದೆ ಎಂದರು. ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.


Ad Widget

Related posts

Malenadu Mirror Desk

ವೀರಶೈವ, ಲಿಂಗಾಯತ ಒಂದೇ: ಡಾ.ಮಹಾಂತ ಸ್ವಾಮೀಜಿ

Malenadu Mirror Desk

ಬಿಎಸ್‌ವೈ ಅವರಿಂದ ಬಿರುಸಿನ ಮತಬೇಟೆ ಸಾಗರ , ಸೊರಬದಲ್ಲಿ ಮಿಂಚಿನ ಸಂಚಾರ ಹಾಲಪ್ಪ, ಕುಮಾರ್ ಸಾಥ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.