ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಮಗಳು ಡಾ. ಸುಸ್ಮಿತಾ ಅವರ ವಿವಾಹ ನಿಶ್ಚಿತಾರ್ಥ ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರ ಸೋದರಿಯಾದ ಬಿ.ಸರೋಜ ಮತ್ತು ಸುರೇಶ್‌ದಂಪತಿಯ ಮೊಮ್ಮೊಗ ನಿತಿನ್ ಅವರೊಂದಿಗೆ ಬೆಂಗಳೂರಿನಲ್ಲಿ ನೆರವೇರಿತು. ಸಾಗರ ಶಾಸಕರೂ ಎಂ.ಎಸ್.ಐ.ಎಲ್ ಅಧ್ಯಕ್ಷರೂ ಆದ ಹಾಲಪ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಭ್ರಮ ಹಂಚಿಕೊಂಡಿದ್ದಾರೆ. ಬೆಂಗಳೂರಿನ ತಾಜ್‌ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಹತ್ತಿರದ ಬಂಧುಗಳು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದರು. . ಸುಶ್ಮಿತಾ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಚಿನ್ನೇಗೌಡರ ತಂಗಿಯ ಮಗನಾದ ವರ ನಿತಿನ್ ಎಂಜಿನಿಯರ್ ಆಗಿದ್ದಾರೆ.
ಚಿತ್ರನಟ ಪುನೀತ್ ರಾಜ್‌ಕುಮಾರ್, ಶ್ರೀಮುರಳಿ, ಚಿನ್ನೇಗೌಡ, ಸಚಿವರಾದ ಈಶ್ವರಪ್ಪ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ರೇಣುಕಾಚಾರ್ಯ, ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕ ಶಾಸಕರು, ಸೇರಿದಂತೆ ಡಾ.ರಾಜ್‌ಕುಮಾರ್ ಹಾಗೂ ಚಿನ್ನೇಗೌಡ ಕುಟುಂಬದ ಸದಸ್ಯರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು.
previous post
next post