ಸೋಗಾನೆ ಯಲ್ಲಿರುವ ಕಾರಾಗೃಹ ದಲ್ಲಿ ಸಜಾಬಂಧಿಯಾಗಿದ್ದ ಜಗದೀಶ್ (೫೧) ಹೃದಯಾಘಾತ ದಿಂದ ಸೋಮವಾರ ಬೆಳಿಗ್ಗೆ ಸಾವಿಗೀಡಾಗಿದ್ದಾರೆ. ಜಗದೀಶ್ ಮಂಗಳೂರು ನ್ಯಾಯಾಲಯ ದಿಂದ ೭ ವರ್ಷ ಶಿಕ್ಷೆಗೆ ಗುರಿ ಯಾಗಿದ್ದನು. ಕಳೆದ ೨ ವರ್ಷಗಳಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಹಠಾತ್ ಕುಸಿದು ಬಿದ್ದಿದ್ದಾನೆ. ತಕ್ಷಣ ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ.
previous post
next post