.ಮಲ್ಲಿಕಾಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಎಸ್. ಆರ್. ಪಾಟೀಲ್, ಮೊದಲಾದವರು ಭಾಗಿ ಸುಮಾರು ೨೦ ಸಾವಿರ ಜನ ಸೇರುವ ನಿರೀಕ್ಷೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಮತ್ತು ಅವರ ಕುಟುಂಬಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ರಾಜಕೀಯ ಒತ್ತಡಕ್ಕೆ ಮಣಿದು ಪೋಲಿಸರು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣದ ಸುಳ್ಳು ಕೇಸು ಹಾಕಿಸಿ ಬಂಧಿಸಿರುವುದನ್ನು ಪ್ರತಿಭಟಿಸಿ “ಶಿವಮೊಗ್ಗ ಚಲೋ” ಜನಾಕ್ರೋಶ ಪ್ರತಿಭಟನೆ ಮತ್ತು ಜನಧ್ವನಿ ಜಾಥಾ ಶನಿವಾರ ನಡೆಯಲಿದೆ.
ಬಿಜೆಪಿ ಆಡಳಿತದಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿರುವಂತಹ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳು ಜನರ ಸೇವೆ ಮಾಡಲು ಅವಕಾಶ ಕೊಡದೇ ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರಜಾ ಪ್ರಭುತ್ವದ ನೀತಿ ಬಿಜೆಪಿಯ ದುಷ್ಟ ಆಡಳಿತಕ್ಕೆ ಬಲಿಯಾಗಿದೆ ಎಂದು ನೋವಿನಿಂದ ಜನರಿಗೆ ತಿಳಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದರೆ ಅಚ್ಚೆದಿನ್ ಬರುತ್ತದೆ ಎಂದು ಬಿಜೆಪಿ ಯವರು ದೊಡ್ಡ ಪ್ರಚಾರ ಮಾಡಿದರು. ಆದರೆ ಅಚ್ಚೆದಿನ್ ನಾಪತ್ತೆಯಾಗಿ ಕಚ್ಚದಿನ್ ಆಗಿ ಸಾಮಾನ್ಯ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಚ್ಚೆದಿನ್ ಹೆಸರಿನಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಹೀಗೆ ಜನರು ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಾಗಿ ಬಡವರ ಜೀವನ ಚಿಂತಾಜನಕ ಸ್ಥಿತಿಯಲ್ಲಿದೆ. ರೈತ ವಿರೋಧಿ, ಕಾರ್ಮಿಕ ವಿರೋಧಿ, ಕಾಯಿದೆಗಳನ್ನು ಅಂಗಿಕರಿಸಿರುವುದು. ಕೊರೊನಾ ಕಾಲದಲ್ಲಂತೂ ಜನರ ಸಂಕಷ್ಟಕ್ಕೆ ಮಿಡಿಯುವ ಪ್ರಯತ್ನವನ್ನು ಸರ್ಕಾರ ಮಾಡಲಿಲ್ಲ. ಬ್ರಿಟಿಷರ ಮನಸ್ಥಿತಿಯ ಬಿಜೆಪಿಯರ ವಿರುದ್ದ ಹೋರಾಟ ಮಾಡಲು ಕಾಂಗ್ರೆಸ್ ಕಹಳೆ ಮೊಳಗಿಸಲು ಜನಧ್ವನಿ ಜಾಥಾವನ್ನು ಆರಂಭಿಸಿ ಜನರನ್ನು ಜಾಗೃತಿಗೊಳಿಸಲು ಮುನ್ನಡೆದಿದೆ.
ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮಧ್ಯಾಹ್ನ ೨ ಗಂಟೆಗೆ ಶಿವಮೊಗ್ಗ ಬಸ್ ನಿಲ್ದಾಣದಿಂದ ಆರಂಭವಾಗಿ ಬಿ.ಹೆಚ್.ರಸ್ತೆ ಮುಖಾಂತರ ಎ.ಎ. ಸರ್ಕಲ್, ಶಿವಪ್ಪನಾಯಕ ಪ್ರತಿಮೆ ಮಾರ್ಗವಾಗಿ ಬಿ.ಹೆಚ್. ರಸ್ತೆಯಲ್ಲಿ ಸಾಗಿ ಸೈನ್ಸ್ ಮೈದಾನವನ್ನು ತಲುಪುತ್ತದೆ. ಸಂಜೆ ೪ ಗಂಟೆಗೆ ಸೈನ್ಸ್ ಮೈದಾನದಲ್ಲಿ ಸಮಾವೇಶ ಗೊಂಡು ಭಾರಿ ಜನಸ್ತೋಮ ಉದ್ದೇಶಿಸಿ ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾತನಾಡುತ್ತಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ , ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಸಲೀಂ ಅಹಮದ್, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ ಆಗಮಿಸುತ್ತಾರೆ. ಜಿಲ್ಲೆಯ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ರವರು, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಶಾಸಕ ಬಿ.ಕೆ ಸಂಗಮೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥs ಭಾಗವಹಿಸುತ್ತಾರೆ.