ಶಿವಮೊಗ್ಗ ದಲ್ಲಿ ಮಾ.20 ರಂದು ಶಿವಮೊಗ್ಗ ದಲ್ಲಿ ನಡೆಯುವ ರೈತರ ಮಹಾ ಪಂಚಾಯತ್ ಸಮಾವೇಶ ಕ್ಕೆ ತೀರ್ಥಹಳ್ಳಿ ಕ್ಷೇತ್ರದಿಂದ ಸುಮಾರು ಏಳು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅದ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತರ ಬೃಹತ್ ಹೋರಾಟ ನೆಡೆಯುತ್ತಿದೆ ತೀರ್ಥಹಳ್ಳಿ ಕ್ಷೇತ್ರದಿಂದ ಪ್ರತಿ ಗ್ರಾಪಂ ನಿಂದ ಒಂದು ಬಸ್ಸಿನಂತೆ ರೈತರು ಸ್ವಯಂ ಪ್ರೇರಿತ ರಾಗಿ ಬರುತ್ತಾರೆ ಎಂದರು.
ತೀರ್ಥಹಳ್ಳಿ ಸಹ ಹೋರಾಟದ ನೆಲ. ಪಾದಯಾತ್ರೆಯ ಮೂಲಕ ರೈತರು ಗಮನ ಸೆಳೆದಿದ್ದಾರೆ. ಈಗ ನಮ್ಮನಡೆ ಶಿವಮೊಗ್ಗದ ಕಡೆಗೆ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್ ಸಮಾವೇಶಕ್ಕೆ ಸಾವಿರಾರೂ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ನಮ್ಮ ಬೆಂಬಲ ನೀಡುತ್ತೇವೆ. ಕಾಯ್ದೆಗಳ ವಿರೋದದ ಜೊತೆಗೆ ಸ್ವಾಮಿನಾಥನ್ ವರದಿ,ಕಸ್ತೂರಿ ರಂಗನ್ ವರದಿ,ಬಗರ ಹುಕುಂ ಸಮಸ್ಯೆ ಗಳೂ ಸೇರಿದಂತೆ ಇನ್ನಿತರ ಸ್ಥಳೀಯ ಸಮಸ್ಯೆ ಗಳ ಬಗ್ಗೆಯೂ ಗಮನ ಸೆಳೆಯ ಲಾಗುವುದು ಎಂದರು.
ಈ ನೆಲದ ಅನ್ನದಾತರು ಇದೀಗ ನಿರ್ಣಾಯಕ ಹಂತದ ಹೋರಾಟಕ್ಕಿಳಿದಿದ್ದಾರೆ. ದೊಡ್ಡದೊಡ್ಡ ಬಂಡವಾಳಿಗರನ್ನು ಒ ಲೈಸುವ ಸಲುವಾಗಿ ಆಳುವ ಸರ್ಕಾರಗಳು ನಮ್ಮ ಬಡ ರೈತರನ್ನು ನಿರ್ಲಕ್ಷಿಸುತ್ತಾ ಬರುತ್ತಿರುವುದು ಹೊಸದೇನು ಅಲ್ಲ, ಇದೇ ಮೊದಲೂ ಅಲ್ಲ .ಆಗಲೂ ಕೂಡ ನಮ್ಮ ನೇಗಿಲ ಯೋಗಿ ತನ್ನ ಉಳುವ ಕಾಯಕವನ್ನು ತೊರೆದು, ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದದ್ದು ತುಂಬಾ ವಿರಳ . ಅನ್ಯಾಯವಾದರು ಮೌನವಾಗಿ ಸಹಿಸಿಕೊಳ್ಳುತ್ತಾ ಬಂದಿದ್ದ . ಆದರೆ ರೈತನ ಈ ಮೌನವನ್ನೇ ದೌರ್ಬಲ್ಯ ಎಂದುಕೊಂಡಿರುವ ಈಗಿನ ಸರ್ಕಾರಗಳು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರೈತರ ಸ್ವಾಭಿಮಾನ , ಅವರ ಮಕ್ಕಳ ಭವಿಷ್ಯ ಮತ್ತು ಅವರ ಹಕ್ಕುಗಳನ್ನು ಶಾಶ್ವತವಾಗಿ ಕಾಪೆರ್Çರೇಟ್ ಕಂಪನಿಗಳ ಅಡಿಯಾಳಾಗಿಸಲು ಮುಂದಾಗಿರೋದು ದುರಂತ . ಈ ಹುನ್ನಾರದ ವಿರುದ್ಧ ದೇಶದ ರೈತರು ಸಿಡಿದೆದ್ದಿದ್ದಾರೆ . ಎಂದರು
ಈ ಕರಾಳ ಶಾಸನಗಳು ಜಾರಿಗೆ ಬಂದಿದ್ದೇ ಆದಲ್ಲಿ ಕೇವಲ ರೈತ ಕುಲ ಮಾತ್ರವಲ್ಲ , ಇಡೀ ದೇಶದ ಬಡವರು , ಶೋಷಿತರು , ಶ್ರಮಿಕ ವರ್ಗ ತಮ್ಮ ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ .ಎಂದರು
ರೈತರು ಕಳೆದ ನೂರು ದಿನಗಳಿಂದ ದೆಹಲಿಯ ಕೊರೆಯುವ ಛಳಿಯನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದಾರೆ . ಅವರ ನ್ಯಾಯಯುತ ಬೇಡಿಕೆಗಳಿಗೆ ಕಿವಿಗೊಡಬೇಕಿದ್ದ ಸರ್ಕಾರ , ದಮನಕಾರಿ ನೀತಿಗಳನ್ನು ಅನುಸರಿಸುತ್ತಾ ಅಸಡ್ಡೆಯಿಂದ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ .ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈಗಾಗಲೇ ಇನ್ನೂರಕ್ಕೂ ಅಧಿಕ ರೈತರು ಈ ಹೋರಾಟದಲ್ಲಿ ಪ್ರಾಣಾರ್ಪಣೆಗೈದಿದ್ದಾರೆ . ಈ ದೇಶವನ್ನು ಇಲ್ಲಿನ ಕೃಷಿ ಪರಂಪರೆಯನ್ನು , ಮುಖ್ಯವಾಗಿ ಅನ್ನದಾತನ ಸ್ವಾಭಿಮಾನವನ್ನು ನಮ್ಮದೇ ಸರ್ಕಾರಗಳು ಮತ್ತೊಮ್ಮೆ ಪರದೇಶಿಗಳ ( ಕಾಪೆರ್Çರೇಟ್ ಬಂಡವಾಳಿಗರ ) ದಾಸ್ಯಕ್ಕೆ ತಳ್ಳುತ್ತಿರುವ ಹುನ್ನಾರವನ್ನು ಹಿಮ್ಮೆಟ್ಟಿಸಬೇಕೆಂಬುದೇ ಅವರೆಲ್ಲರ ಆಶಯ . ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ದೇಶದಲ್ಲಿ ಇದೀಗ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ವಾತಾವರಣ ನಿರ್ಮಾಣವಾಗಿದೆ ಎಂದರು.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶವು ದಕ್ಷಿಣ ಭಾರತದ ಮೊದಲ ಸಮಾವೇಶವಾಗಿದ್ದು, ರಾಷ್ಟ್ರೀಯ ರೈತ ನಾಯಕರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್, ಯುದ್ದವೀರ್‍ಸಿಂಗ್ ಸೇರಿದಂತೆ ಹಲವಾರು ರೈತ ಮುಖಂಡರು, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಲ್.ಷಡಾಕ್ಷರಿ, ಜಗದೀಶ್, ರಾಮಕೃಷ್ಣ, ಸುಂದರೇಶ್, ವಿನಾಯಕ್, ಆನಂದ್, ರಾಜು ಇನ್ನಿತರರು ಉಪಸ್ಥಿತರಿದ್ದರು.