ಜೆಡಿಎಸ್ ನಾಯಕ ಎಂ.ಶ್ರೀಕಾಂತ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್ ಅವರುಗಳು ಸೋಮವಾರ ಜನ್ಮದಿನ ಆಚರಿಸಿಕೊಂಡರು. ಕಾಂತೇಶ್ ಜನ್ಮದಿನ ನಿಮಿತ್ತ ನಟ ದುನಿಯಾ ವಿಜಯ ನಟನೆಯ ಸಲಗ ಚಿತ್ರದಂಡದೊಂದಿಗೆ ಕ್ರಿಕೆಟ್ ಮ್ಯಾಚ್ ಆಯೀಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಹಾಗೂ ಅವರ ಬೆಂಬಲಿಗರು ಅಭಿಮಾನಿಗಳು ಭಾಗವಹಿಸಿದ್ದರು. ಸೋಮವಾರ ಬೆಳಗ್ಗೆ ಕಾರ್ಮಿಕರಿಗೆ ಉಪಹಾರ ವ್ಯವಸ್ಥೆ ಮಾಲಾಗಿತ್ತು. ಸ್ವತಃ ಕಾಂತೇಶ್ ಕಾರ್ಮಿಕರಿಗೆ ಆಹಾರ ನೀಡಿದರು.
ಶ್ರೀಕಾಂತ್ ಅಭಿಮಾನಿಗಳಿಂದ ರಕ್ತದಾನ
ರೈತ ಮಹಾಪಂಚಾಯತ್ ಯಶಸ್ವಿಗೊಳಿಸುವಲ್ಲಿ ಅಪಾರ ಶ್ರಮ ಹಾಕಿದ್ದ ಜೆಡಿಎಸ್ ನಾಯಕ ಎಂ.ಶ್ರೀಕಾಂತ್ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಬಡವರಿಗೆ ದಾನ ಧರ್ಮ ಸೇರಿದಂತೆ ಶ್ರೀಕಾಂತ್ ಬೆಂಬಲಿಗರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಯುವಕರು ರಕ್ತದಾನ ಮಾಡುವ ಮೂಲಕ ತಮ್ಮ ನಾಯಕನ ಜನ್ಮದಿನಾಚರಣೆಯನ್ನು ಸಾರ್ಥಕಗೊಳಿಸಿದರು. ಈ ಸಂದರ್ಭದಲಿ ಮಹಾನಗರ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಪಾಲಾಕ್ಷಿ ಭಾಸ್ಕರ್, ಬಸವ ಸೇರಿದಂತೆ ಹಲವು ಮುಖಂಡರು ಶ್ರೀಕಾಂತ್ ಬೆಂಬಲಿಗರು ಉಪಸ್ಥಿತರಿದ್ದರು.ಬೆಂಗಳೂರಿನಲ್ಲಿ ಮಾಜಿ ಸಚಿವ ಹಾಗು ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಅವರು ಎಂ.ಶ್ರೀಕಾಂತ್ ಅವರಿಗೆ ಜನ್ಮದಿನ ಶುಭಾಶಯ ಕೋರಿದರು.