Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಸೊರಬದಲ್ಲಿ ತಲೆ ಎತ್ತಲಿದೆ ಮಾದರಿ ಈಡಿಗ ಭವನ

ರಾಜ್ಯದಲ್ಲಿಯೇ ಮಾದರಿಯಾಗಲಿರುವ ಈಡಿಗ ಭವನವನ್ನು ಸೊರಬದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದ್ದಾರೆ. ಮುಖಂಡರುಗಳೊಂದಿಗೆ ನಿವೇಶನ ಪರಿಶೀಲಿಸಿದ ಅವರು, ಸರಕಾರ ನಿವೇಶನ ಮಂಜೂರು ಮಾಡಿದೆ. ಈಗ ಭವನ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ 2 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಒಟ್ಟು 15 ಕೋಟಿ ರೂ.ವೆಚ್ಚದ ಮಾದರಿ ಭವನ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡಲಾಗುವುದು ಇದಕ್ಕೆ ಸಮುದಾಯದವರ ಸಹಭಾಗಿತ್ವ ಅತ್ಯಗತ್ಯ ಎಂದು ಹೇಳಿದರು.
ಸರ್ವೆ ನಂ.111ರಲ್ಲಿ ಈಡಿಗ ಸಮುದಾಯ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ 5ಎಕರೆ ಜಮೀನು ಮಂಜೂರಾಗಿದೆ. ಸಮಾಜದ ಅಭಿವೃದ್ಧಿಗೆ ರಾಜಕೀಯ ಬೆರಸದೆ ಎಲ್ಲರೂ ಸಾಂಘಿಕವಾಗಿ ಶ್ರಮಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗೋಣ. ಸಾವಿರಾರು ಜನ ಕುಳಿತು ವೀಕ್ಷಣೆ ಮಾಡಬಹುದಾದ ಆಸನ ಮೂಲಭೂತ ವ್ಯವಸ್ಥೆಗಳ ಕುರಿತು ನೀಲ ನಕ್ಷೆ ತಯಾರು ಮಾಡಲು ಎಂಜನಿಯರ್‍ಗೆ ಶಾಸಕರು ಸೂಚನೆ ನೀಡಿದರು.
ಅಂದಾಜು ರೂ 15ಕೋಟಿ ವೆಚ್ಚದಲ್ಲಿ ಸಮುದಾಯ ನಿರ್ಮಾಣಕ್ಕೆ ಶಾಸಕನಾಗಿ ಹಣ ಕ್ರೂಢೀಕರಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಮುಂದಿನ ಒಂದು ವರ್ಷದ ಅವಧಿಯೊಳಗೆ ಸಮುದಾಯ ಭವನ ಲೋಕಾರ್ಪಣೆಗೊಳ್ಳುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೆ.ಅಜ್ಜಪ್ಪ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಕುಮಾರ್ ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸಹಕಾರ ನೀಡಿದ್ದು, ಅವರೆಲ್ಲರಿಗೂ ಸಮಾಜ ಅಭಾರಿಯಾಗಿರುತ್ತದೆ ಎಂದು ತಿಳಿಸಿದರು.
ಈಡಿಗ ಸಮಾಜದ ಉಪಾಧ್ಯಕ್ಷ ಜಿ.ಡಿ.ನಾಯ್ಕ್, ಕಾರ್ಯದರ್ಶಿ ಎಂ.ಡಿ.ಶೇಖರ್, ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್, ಉಪಾಧ್ಯಕ್ಷ ಮಧುರಾಯ್ ಶೇಟ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಶಿವಾನಂದಪ್ಪ, ಭೋಗೇಶ್ ಶಿಗ್ಗಾ, ಟಿ.ಆರ್.ಸುರೇಶ್, ನಾಗರಾಜ್ ಚಿಕ್ಕಸವಿ, ಬರಗಿ ನಿಂಗಪ್ಪ, ಮಹಾದೇವಪ್ಪ, ಡಾಕಪ್ಪ, ಯಲಸಿ ಹನುಮಂತಪ್ಪ, ಗುರುಮೂರ್ತಿ ಓಟೂರು, ಪಕ್ಕೀರಪ್ಪ ಮಾಕೊಪ್ಪ, ನಿಂಗಪ್ಪ ಗುಂಡಶೆಟ್ಟಿಕೊಪ್ಪ, ಮಣ್ಣತ್ತಿ ಪರಮೇಶ್ವರ ಮತ್ತಿತರರಿದ್ದರು.

Ad Widget

Related posts

ಬಿಜೆಪಿ ಭಾವನಾತ್ಮಕ ಆಟ ನಿಲ್ಲಿಸಬೇಕು: ಮಧುಬಂಗಾರಪ್ಪ

Malenadu Mirror Desk

ಶಿವಮೊಗ್ಗದಲ್ಲಿ146 ಮಂದಿಗೆ ಕೊರೊನ ಒಂದು ಸಾವು ಯಾವ ತಾಲೂಕುಗಳಲ್ಲಿ ಎಷ್ಟು ಪಾಸಿಟಿವ್? ಇಲ್ಲಿದೆ ಮಾಹಿತಿ

Malenadu Mirror Desk

ಶಿವಮೊಗ್ಗ ಕೊರೊನ: 4 ಸಾವು,399 ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.