ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದಲೇ ಕೈ ಬಿಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಬೆಂಬಲಿಗ ಸಚಿವರು ಹಾಗೂ ಸಚಿವರೊಂದಿಗೆ ಬೋಜನ ಕೂಟ ನಡೆಸಿರುವ ಸಿಎಂ ಯಡಿಯೂರಪ್ಪ ಅವರು, ಈಶ್ವರಪ್ಪರ ನಡೆಗೆ ಕೆಂಡಾಮಂಡಲವಾಗಿದ್ದು, ಖಾತೆ ಬದಲಾವಣೆ ಮಾಡುವೆ. ಇನ್ನೂ ಮುಂದುವರಿದರೆ ಸಂಪುಟದಿಂದಲೇ ಕೈಬಿಡುವೆ ಎಂದು ಬೆಂಬಲಿಗರ ಬಳಿ ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ಖಾತೆಯಲ್ಲಿನ ಹಸ್ತಕ್ಷೇಪದ ಬಗ್ಗೆ ಗಮನ ಸೆಳೆದಿದ್ದೇನೆ. ಹಿರಿಯ ಸಚಿವನಾಗಿ ಇಷ್ಟೂ ಸ್ವತಂತ್ರ ಬೇಡವೇ ಎಂದಿರುವ ಈಶ್ವರಪ್ಪ ಅವರು ಸಿಎಂ ನಡೆಯ ಬಗ್ಗೆ ಆಕ್ರೋಶ ವ್ಯಕ್ತಮಾಡಿದ್ದಾರೆನ್ನಲಾಗಿದೆ.
ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಸಿಸಿ ಪಾಟೀಲ್, ಡಾ.ಕೆ.ಸುಧಾಕರ್, ಆರ್.ಅಶೋಕ್ ಸೇರಿದಂತೆ ಅನೇಕ ಶಾಸಕರೂ ಹಾಜರಿದ್ದರು ಎನ್ನಲಾಗಿದೆ.
previous post
next post