Malenadu Mitra
ರಾಜ್ಯ

ಈಶ್ವರಪ್ಪಗೆ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣು ಮಾಜಿ ಶಾಸಕ ಕೆ ಬಿ ಪ್ರನ್ನಕುಮಾರ್ ಹೇಳಿಕೆ

ಸಚಿವ ಕೆ. ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿದ್ದು, ಅದನ್ನು ಗಿಟ್ಟಿಸಿಕೊಳ್ಳುವ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡಿದ್ದಾರೆಯೇ ವಿನಾ ಇಲಾಖೆಯ ಕೆಲಸಗಳ ಸಂಬಂಧ ಅಲ್ಲ ಎಂದು ಕೆಪಿಸಿಸಿ ವಕ್ತಾರ ಮತ್ತು ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈಶ್ವರಪ್ಪ ಅವರ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ತಳಮಳ ಶುರುವಾಗಿದೆ. ಮುಖ್ಯಮಂತ್ರಿ ಅವರು ಈಶ್ವರಪ್ಪರ ಅವರನ್ನು ಹೊರಹಾಕಬೇಕು. ಇಲ್ಲವಾದರೆ ತಾವೇ ರಾಜಿನಾಮೆ ಕೊಟ್ಟು ಯಡಿಯೂರಪ್ಪ ಮನೆಗೆ ಹೋಗಬೇಕೆಂದರು.
ಮುಖ್ಯಮಂತ್ರಿ ಪಟ್ಟ ಸಿಕ್ಕರೆ ಅನುಭವಿಸುವ ದೃಷ್ಟಿಯಿಂದ ಈಶ್ವರಪ್ಪ ಈ ರೀತಿ ಮಾತನಾಡಿದ್ದಾರೆ. ಅವರು ಬರೆದ ಪತ್ರದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಬೇಕು. ಸರಕಾರದಲ್ಲಿ ಈಗ ಯಾವ ಕೆಲಸವೂ ನಡೆಯುತ್ತಿಲ್ಲ. ಕೇವಲ ಅಧಿಕಾರಿಗಳ ವರ್ಗಾವಣೆ ಮಾತ್ರ ನಡೆಯುತ್ತಿದೆ. ಈಶ್ವರಪ್ಪ ಅವರು ಇವತ್ತಿಗೂ ಮಾಡುತ್ತಿರುವುದು ಅದನ್ನೇ. ತಮಗೆ ನಿಷ್ಠ ಅಧಿಕಾರಿಗಳನ್ನು ಬೇಕೆಂದಲ್ಲಿಗೆ ವರ್ಗಾವಣೆ ಮಾಡಿಸುತ್ತಾರೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಚಾರುಲತಾ ಅವರನ್ನು ವರ್ಗ ಮಾಡಿಸಿದ್ದಾರೆ. ಇದರಿಂದ ಈಗ ಸ್ಮಾರ್ಟಸಿಟ ಯಾರಿಗೂ ಬೇಡವಾಗಿದೆ. ಅಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ. ಇದೇ ಅವರ ಸಾಧನೆ ಎಂದು ಟೀಕಿಸಿದರು.

ಹಿರಿತನವನ್ನುಸದುದ್ದೇಶಕ್ಕೆ ಬಳಸುತ್ತಿಲ್ಲ


ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳುವುದರ ಮೂಲಕ ಅವ್ಯವಹಾರದ ರಹದಾರಿ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಕಿಯೋನಿಕ್ಸ್‌ನಲ್ಲಿ ತಮ್ಮ ಮಗ ಮತ್ತು ಮೊಮ್ಮಗನ ಸಂಸ್ಥೆಯೊಂದಕ್ಕೆ ೩೯೬೦ ಸ್ಕ್ವೇರ್ ಅಡಿಯ ಜಾಗವನ್ನು ಪಡೆದುಕೊಂಡಿದ್ದಾರೆ. ಪ್ರತಿ ಚದರ ಅಡಿಗೆ ೫ ರೂ. ಬಾಡಿಗೆ ಮತ್ತು ಒಂದು ರೂ. ನಿರ್ವಹಣೆ ಅಡಿ ಇದನ್ನು ಪಡೆದಿದ್ದಾರೆ. ಅವರು ತಮ್ಮ ಅನುಭವವನ್ನು ಮತ್ತು ಹಿರಿತನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಯೇ ವಿನಾ ಸದುದ್ದೇಶಕ್ಕೆ ಬಳಸುತ್ತಿಲ್ಲ ಎಂದರು.

ಹುಣಸೋಡು ಘಟನೆಯನ್ನು ದಾರಿತಪ್ಪಿಸಲಾಗಿದೆ. ಮನೆಹಾನಿಯನ್ನು ಗುರುತಿಸಿ ಅವರಿಗೆ ದುರಸ್ಥಿತಿಗೆ ಹಣ ಬಿಡುಗಡೆ ಮಾಡಿಲ್ಲ. ತಪ್ಪಿತಸ್ಥರ ಬಂಧನವಾಗಿಲ್ಲ. ಇನ್ನು ೨೦ ದಿನದ ಗಡುವು ಕೊಟ್ಟಿದ್ದು. ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪಾಲಿಕೆಯ ಹಿರಿಯ ಸದಸ್ಯ ರಮೇಶ ಹೆಗ್ಡೆ ಮಾತನಾಡಿ, ಆಶ್ರಯ ಯೋಜನೆಯಡಿ ೪೮೩೬ ಮನೆಗಳು ಮಂಜೂರಾಗಿದ್ದರೂ, ಇನ್ನೂವರೆಗೂ ಅದನ್ನು ಅರ್ಹರಿಗೆ ಕೊಡುವ ಕೆಲಸ ಮಾಡಿಲ್ಲ. ಪ್ರಸನ್ನಕುಮಾರ್ ಶಾಸಕರಿದ್ದಾಗ ಈ ಮನೆಯನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಈ ಮನೆಗಳಿದ್ದು, ಅರ್ಹರಿಗೆ ನೀಡಲಾಗಿದೆ. ಆದರೆ ಮನೆ ಕಟ್ಟಿಸಿಕೊಡಲು ಈಶ್ವರಪ್ಪ ಅವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ, ಮಂಜುಳಾ, ಮೆಹಕ್ ಶರೀಫ್, ಆರ್. ಸಿ. ನಾಯ್ಕ್ ಮತ್ತು ರಂಗನಾಥ ಹಾಜರಿದ್ದರು.

Ad Widget

Related posts

ಫೌಂಡ್ರಿಮೆನ್ ಸಂಘಟನೆಗೆ ಉದ್ಯಮಿ ಚಂದ್ರಶೇಖರ್ ಆಯ್ಕೆ, ಶಿವಮೊಗ್ಗ ಫೌಂಡೇಷನ್ ಸಂಘಟನೆಗಳಿಂದ ಸನ್ಮಾನ

Malenadu Mirror Desk

ತಿಂಗಳ ಸಂಬಳ ಕೊರೊನ ನಿರ್ವಹಣೆಗೆ

Malenadu Mirror Desk

ಶಿವಮೊಗ್ಗ ಲೋಕಸಭೆ ಕ್ಷೇತ್ರ ಅಡವಿಯಂತೆ ನಿಗೂಢ…ಗ್ಯಾರಂಟಿ, ಅಭಿವೃದ್ಧಿ, ಹಿಂದುತ್ವ, ಅನುಕಂಪದ ಅಲೆ..

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.