Malenadu Mitra
ರಾಜ್ಯ

ಅಧಿಕಾರಕ್ಕಾಗಿ ಸಮಾಜಸೇವೆ ಮಾಡಿಲ್ಲ; ಎಂ. ಶ್ರೀ ಕಾಂತ್

ಸೈಕಲ್ ಶಾಪ್, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡಿ ಹಂತ ಹಂತವಾಗಿ ಸಮಾಜದಲ್ಲಿ ಬೆಳೆದ ನನಗೆ ಬಡವರ ಕಷ್ಟ ಗೊತ್ತಿದೆ. ನಾವು ಎಷ್ಟು ಎತ್ತರಕ್ಕೆ ಬೆಳೆದಿದ್ದರೂ ಹಿಂದಿನದನ್ನು ಮರೆಯಬಾರದು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀ ಕಾಂತ್ ಹೇಳಿದರು.
ಶಿವಮೊಗ್ಗಸರ್ಕಾರಿ ನೌಕರರ ಭವನದಲ್ಲಿ ನಗರದ ಪತ್ರಿಕಾ ವಿತರಕರಿಗಾಗಿ ಹಮ್ಮಿಕೊಂಡಿದ್ದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ಬ್ಯಾಗ್‌ಗಳನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ನಾನು ೧೮ ವರ್ಷದಿಂದ ರಾಜಕೀಯದ ಲ್ಲಿದ್ದೇನೆ, ಪಕ್ಷ ಕಟ್ಟಿದ್ದೇನೆ, ಅನೇಕರನ್ನು ಬೆಳೆಸಿದ್ದೇನೆ ,ಆದರೆ ರಾಜಕೀಯದಲ್ಲಿ ಅಧಿಕಾರ ಸಿಕ್ಕಿಲ್ಲ, ನಾನು ಎಂದಿಗೂ ಅಧಿಕಾರಕ್ಕಾಗಿ ಸಮಾಜ ಸೇವೆ ಯನ್ನು ಮಾಡಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ ಎಂದರು.
ಪ್ರತಿ ಮನೆಗೆ ದಿನ ಪತ್ರಿಕೆ ತಲುಪಿಸುವ ಮಹಾನ್ ಕಾರ್ಯ ಮಾಡುತ್ತಿರುವ ಪತ್ರಿಕಾ ವಿತರಕರಿಗೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕ ರಿಗೆ ನಿವೇಶನ ಅಥವಾ ಮನೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿ ಕಾರ್ಯಗತ ಮಾಡಲು ಪ್ರಯತ್ನಿಸು ವುದಾಗಿ ಹೇಳಿದರು.


ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಮಾತನಾಡಿ, ಶ್ರೀಕಾಂತ್‌ರವರು ಉತ್ತಮ ಸಂಸ್ಕಾರ ಹೊಂದಿದ ಕುಟುಂಬದಿಂದ ಬಂದ ವರು. ಸಮಾಜದಲ್ಲಿ ಕಷ್ಟದ ಜೀವನ ನಡೆಸುತ್ತಿರುವ ಪತ್ರಿಕ ವಿತರಕರ ಸೇವೆಯನ್ನು ಸ್ಮರಿಸುವ ಗುಣ ಅವರಲ್ಲಿರುವುದರಿಂದ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಬಡವರ ಕಷ್ಟಕ್ಕೆ ಸ್ಪಂದಿಸುವ ಅವರು ಮುಂದೆ ರಾಜಕೀಯದಲ್ಲಿ ಬೆಳೆದು ಶಾಸಕರು, ಮಂತ್ರಿಗಳಾಗಲಿ ಎಂದು ಹಾರೈಸಿದರು.


ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಅತಿವೃಷ್ಟಿಯಾದಾಗ ಪತ್ರಿಕಾ ವಿತರಕರು ಸೇರಿದಂತೆ ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಅನೇಕರಿಗೆ ಸಹಾಯ ಮಾಡಿರುವ ಶ್ರೀಕಾಂತ್ ಅಂತಹವರು ರಾಜಕೀಯದಲ್ಲಿ ಅಪರೂಪ. ಪತ್ರಿಕಾ ವಿತರಕರ ಸಂಘಟನೆಗೆ ನಿವೇಶನವನ್ನು ಕೊಡಿಸುವ ಕೆಲಸ ಎಲ್ಲರ ಪ್ರಯತ್ನದಿಂದ ಆಗಬೇಕು ಎಂದರು.
ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್ ಮಾತನಾಡಿ, ಮಳೆ ಚಳಿ ಎನ್ನದೆ ಪ್ರತಿದಿನ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರ ಕಾಯಕ ಮೆಚ್ಚುವಂತದ್ದು, ಇಂತಹ ಪತ್ರಿಕಾ ವಿತರಕರನ್ನು ಗುರುತಿಸಿ ಅಭಿನಂದಿಸು ತ್ತಿರುವ ಎಂ. ಶ್ರೀಕಾಂತ್‌ರವರ ಕೆಲಸವೂ ದೊಡ್ಡದು ಎಂದರು.
ಕಾರ್ಯಕ್ರಮದಲ್ಲಿ ನಗರದ ರಾಜ್ಯ ಹಾಗೂ ಸ್ಥಳಿಯ ಪತ್ರಿಕೆಗಳ ಸುಮಾರು ೩೦೦ ವಿತರಕರಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಮಾಜಿ ಕೌನ್ಸಿಲರ್ ವಿಶ್ವನಾಥ ಕಾಶಿ, ಪತ್ರಕರ್ತ ಜೇಸುದಾಸ್ ಉಪಸ್ಥಿತರಿದ್ದರು. ಮಾಜಿ ಮೇಯರ್ ನಾಗರಾಜ್ ಕಂಕಾರಿ ಸ್ವಾಗತಿಸಿದರು. ಮಾಜಿ ಉಪಮೇಯರ್ ಪಾಲಾಕ್ಷಿ ನಿರೂಪಿಸಿದರು.

Ad Widget

Related posts

ಉನ್ನತ ಸ್ಥಾನಕ್ಕೇರಲು ಶಿಕ್ಷಣ ಬಿಟ್ಟರೆ ಬೇರೆ ದಾರಿ ಇಲ್ಲ:ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್

Malenadu Mirror Desk

ಹರಿಹರಪುರದಲ್ಲಿ ಏ.10 ರಿಂದ ಐತಿಹಾಸಿಕ ಕುಂಭಾಭಿಷೇಕ
ಧಾರ್ಮಿಕ ಸಭೆ, ಹಲವು ಸ್ವಾಮೀಜಿಗಳು ಭಾಗಿ

Malenadu Mirror Desk

ಕೇಂದ್ರ ಸರಕಾರಿ ಮಾದರಿ ವೇತನ: ಸಿಎಂ, ಮಾಜಿ ಸಿಎಂ ಗೆ ಷಡಾಕ್ಷರಿ ಕೃತಜ್ಞತೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.