ಕಾರ್ಮಿಕ ಹೋರಾಟದ ನೇತೃತ್ವ ವಹಿಸುವುದು ಹುಲಿ ಸವಾರಿ ಇದ್ದಂಗೆ,ಹುಲಿಯನ್ನು ರೇಗಿಸಿ ಕೆಳಗಿಳಿದರೆ ಸವಾರನನ್ನೆ ಹುಲಿ ತಿಂದು ಹಾಕುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕೂಡಿಹಳ್ಳಿ ಚಂದ್ರಶೇಖರ್ ಅವರಿಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು,ಕೂಡಿಹಳ್ಳಿ ಚಂದ್ರಶೇಖರ್ ಅವರಿಗೆ ರೈತ ಹೋರಾಟದ ಅನುಭವವಿರಬಹುದು.ಆದರೆ ಕಾರ್ಮಿಕರ ಹೋರಾಟದ ಅನುಭವ ಇದ್ದಂತೆ ಕಾಣುತ್ತಿಲ್ಲ.ಕಾರ್ಮಿಕ ಕಾಯ್ದೆಗಳನ್ನು ತಿಳಿದುಕೊಂಡು ಹೋರಾಟಕ್ಕೆ ಇಳಿಯಬೇಕಾಗುತ್ತದೆ.ಮುಂಬೈನಲ್ಲಿ ಕಾರ್ಮಿಕ ಹೋರಾಟದ ನೇತೃತ್ವ ವಹಿಸಿದ್ದ ದತ್ತಾ ಸಾವಂತ್ ಅಂತಿಮ ಫಲಿತಾಂಶ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಬಾರದಿರಲಿ ಎಂದು ಎಚ್ಚರಿಸಿದರು.
ಸಾರಿಗೆ ನೌಕರರು ಮತ್ತು ಸರ್ಕಾರದ ನಡುವೆ ಬಿಕ್ಕಟ್ಟು ಶುರುವಾಗಿ ವಿಕೋಪಕ್ಕೆ ಹೋಗಿದೆ.ಸರ್ಕಾರ ಮತ್ತು ಸಾರಿಗೆ ನೌಕರರ ಪ್ರತಿಷ್ಟೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದ ಅವರು,ಸರ್ಕಾರ ಸಾರಿಗೆ ನೌಕರರ ೯ ಬೇಡಿಕೆಗಳನ್ನು ಈಡೇರಿಸಿದೆ.ಈ ನಡುವೆಯೇ ೬ನೇ ವೇತನ ಜಾರಿಗೊಳಿಸುವಂತೆ ಮುಷ್ಕರ ನಡೆಸಿರುವುದು ಕಾನೂನುಬಾಹಿರವಾಗಿದೆ.ಸಾರಿಗೆ ನೌಕರರು ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ತಟ್ಟೆ ಲೋಟಕ್ಕೆ ಸೀಮಿತವಾಗಲಿ.ಹೋರಾಟದ ನೇತೃತ್ವ ವಹಿಸಿರುವ ನಾಯಕರು ಎಡವಿದರೆ ಕಾರ್ಮಿಕರ ಕೈಯಲ್ಲಿ ಚೊಂಬು ಕೊಡಲಿದ್ದಾರೆ ಎಂದ ಅವರು,ರಾಜ್ಯದಲ್ಲಿ ಕರೋನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ.ಲಾಕ್‌ಡೌನ್ ಆದರೆ ಯಾರಿಗೂ ಕೆಲಸ ಇರುವುದಿಲ್ಲ,ಉದ್ಯೋಗ ಭದ್ರತೆ ಇಲ್ಲದೇ ಸಂಬಳವೂ ಇಲ್ಲದೇ ಜೀವನ ನಡೆಸುವುದು ಕಷ್ಟವಾಗಲಿದೆ.ಹಾಗಾಗಿ ಪ್ರತಿಷ್ಟೆ ಕೈ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದರು.
ReplyForward |