Malenadu Mitra
ರಾಜ್ಯ ಶಿವಮೊಗ್ಗ

ಸಾಮಾಜಿಕ ಸಮಸ್ಯೆಗಳ ಮುಕ್ತಿಗೆ ಉನ್ನತ ಶಿಕ್ಷಣ ಮದ್ದು

ಸಾಮಾಜಿಕ ಸಮಸ್ಯೆಗಳಿಂದ ಮುಕ್ತಿಹೊಂದಲು ಉನ್ನತ ಶಿಕ್ಷಣ ಮದ್ದಿನಂತೆ ಕೆಲಸ ಮಾಡುತ್ತದೆ ಎಂದು ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ್ ಹೇಳಿದರು.

ಸೊರಬ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪರಿವರ್ತನಾ ಮಾಸಾಚರಣೆ ನಿಮಿತ್ತ ಬುಧವಾರ ಅಕ್ಕಮಹಾದೇವಿ ಹೆಸರಿನಲ್ಲಿ‌ ಆರಂಭಿಸಿದ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಿಂದ ಮಾತ್ರ ವಿಕಾಸ ಹೊಂದಬಹುದಾಗಿದ್ದು, ಬಡತನ, ಮೂಡನಂಬಿಕೆ, ಶೋಷಣೆಗಳಿಂದ ಹೊರ ಬರಲು ಉನ್ನತ ಶಿಕ್ಷಣ ಪಡೆಯುವ ಅಗತ್ಯವಿದೆ. ಅಸ್ಪೃಶ್ಯತೆ ತಾಂಡವವಾಡುತ್ತಿರುವ ಕಾಲಘಟ್ಟದಲ್ಲಿ ದಲಿತ ಸಮುದಾಯದಲ್ಲಿ ಜನಿಸಿದ ಅಂಬೇಡ್ಕರ್ ವಿಶ್ವಕ್ಕೆ ಮಾದರಿಯಾಗಬಹುದಾದ ಶಿಕ್ಷಣ ಹಾಗೂ ಜ್ಞಾನ ಸಂಪಾದಿಸಿದ್ದು ಮಹಾನ್ ಸಾಧನೆಯಾಗಿದೆ. ಅವರು ಬರೆದ ಸಂವಿಧಾನದಿಂದಲೇ ಜನಸಾಮಾನ್ಯರ ಬದುಕಿಗೆ ಅರ್ಥ ಬಂದಿದೆ. ಹಿಂದುಳಿದ ಜಾತಿ, ಸಮುದಾಯದ ವಿದ್ಯಾರ್ಥಿಗಳು ನಿರಂತರ ಓದು, ಪರಿಶ್ರಮದಿಂದ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆದು ಫೋಷಕರ ಸಂಕಷ್ಟಗಳಿಗೆ ಸಂಜೀವಿನಿಯಾಗಬೇಕು ಎಂದ ಅವರು ಮಹಿಳಾ ಸ್ವಾತಂತ್ರ್ಯಕ್ಕೆ ವಚನಗಾರ್ತಿ ಅಕ್ಕಮಹಾದೇವಿ ಕೊಡುಗೆ ಅನನ್ಯವಾಗಿದ್ದು ಬಾಲಕಿಯರ ವಿದ್ಯಾರ್ಥಿ ನಿಲಯಲ್ಲಿ ಆರಂಭವಾದ ಗ್ರಂಥಾಲಯಕ್ಕೆ ಅವರ ಹೆಸನ್ನಿಟ್ಟಿರುವುದು ಸ್ವಾಗತಾರ್ಹ ಎಂದರು.

ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಅಶ್ವಿನಿ ಭಂಡಾರಿ, ನಿಲಯ ಪಾಲಕಿ ಶೀಲಾ, ಆನವಟ್ಟಿ ನಿಲಯ ಪಾಲಕ ಮೃತ್ಯುಂಜಯ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರಿದ್ದರು.

Ad Widget

Related posts

ಕೊರೊನ ವಾರಿಯರ್ಸ್ ಸೇವೆ ಶ್ಲಾಘನೀಯ: ಫಾದರ್ ರೋಶನ್ ಪಿಂಟೊ

Malenadu Mirror Desk

ಸತೀಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಕೈ ಬಿಡಬೇಕು: ಬಿಜೆಪಿ

Malenadu Mirror Desk

ಕಣ್ಣೂರು ಕಚ್ಚಾಬಾಂಬ್ ಸ್ಫೋಟದ ಹಿಂದಿನ ಅಸಲಿಯತ್ತು ಗೊತ್ತಾ ?, ಬಚ್ಚಲುಮನೆ ಒಲೆಯಲ್ಲಿ ಬಾಂಬಿಟ್ಟು ಕೊಲೆ ಸಂಚು ನಡೆದಿತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.