Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗದಲ್ಲಿ ಏರುಗತಿಯಲ್ಲಿ ಕೊರೊನ,ಯಾವ ತಾಲೂಕುಗಳಲ್ಲಿ ಎಷ್ಟು ಪಾಸಿಟಿವ್? ಇಲ್ಲಿದೆ ಮಾಹಿತಿ

ರಾಜದಾನಿ ಬೆಂಗಳೂರಿಗೆ ಮಾತ್ರ ಕೊರೊನ ಆರ್ಭಟ ಸೀಮಿತವಾಗಿಲ್ಲ, ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೂ ಇದು ವೇಗ ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರು ಸ್ವಯಂ ಜಾಗ್ರತೆ ವಹಿಸಬೇಕಾಗಿರುವ ಅಗತ್ಯವಿದೆ. ಭಾನುವಾರ ಒಂದೇ ದಿನ 155 ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಜಿಲ್ಲಾಕೇಂದ್ರ ಶಿವಮೊಗ್ಗದಲ್ಲಿ 55, ಭದ್ರಾವತಿ ತಾಲೂಕಿನಲ್ಲಿ -47,ಶಿಕಾರಿಪುರ-7, ತೀರ್ಥಹಳ್ಳಿ-2,ಸೊರಬಾ-4 ಸಾಗರದಲ್ಲಿ-9,ಹೊಸನಗರ -22 ಹಾಗೂ ಅನ್ಯಜಿಲ್ಲೆಗಳಿಂದ ಬಂದವರಲ್ಲಿ 9 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 4 ಮಂದಿ ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 731 ಸಕ್ರಿಯ ಪ್ರಕರಣಗಳಿವೆ. 466 ಮಂದಿಗೆ ಹೋಮ್ ಐಸೋಲೇಷನ್‌ಗೆ ಒಳಪಡಿಸಲಾಗಿದೆ. 

Ad Widget

Related posts

ಮೆಗ್ಗಾನ್‍ನಲ್ಲಿ ಸತ್ತವರ ಸಂಖ್ಯೆ ಮುಚ್ಚಿಡಲಾಗುತ್ತಿದೆಯೇ ? ಎರಡು ದಿನಗಳಲ್ಲಿ 41 ಸಾವು ?

Malenadu Mirror Desk

ಪ್ರಿಯದರ್ಶಿನಿ ಆಂಗ್ಲ ಶಾಲೆ ಅದ್ವಿತೀಯ ಸಾಧನೆ

Malenadu Mirror Desk

ಸಂಪದ್ಬರಿತ ರಾಜ್ಯಕ್ಕಾಗಿ ಜಲಧಾರೆ ಯಾತ್ರೆ, ಪಕ್ಷ ಅಧಿಕಾರಕ್ಕೆ ಬಂದರೆ ಸುಭಿಕ್ಷ ಆಡಳಿತ ನೀಡುವೆ ಎಂದ ಕುಮಾರಸ್ವಾಮಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.