ಮಲೆನಾಡಿನ ಹಲವು ಭಾಗಗಳಲ್ಲಿ ಭಾನುವಾರ ಸಂಜೆ ಮಳೆಯಾಗಿದ್ದು, ಕಾದ ಕಾವಲಿಯಾದಂತಾಗಿದ್ದ ಇಳೆಗೆ ತಂಪರೆದಿದೆ. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಮಿಂಚು,ಗುಡುಗು ಹಾಗೂ ಸಿಡಿಲುಗಳ ಮುಮ್ಮೇಳದೊಂದಿಗೇ ಬಂದ ಮಳೆಯಿಂದ ಭುವಿಯು ಕೊಂಚ ತಂಪಾಗಿದೆ.
ಮುAಗಾರು ಪೂರ್ವದ ಮಳೆಯಿಂದಾಗಿ ನೀರಿನ ಕೊರತೆಯಾಗಿದ್ದ ತೋಟಗಳಿಗೆ ಅನುಕೂಲವಾಗಿದೆ. ಈ ಬಾರಿ ಬಹುನಿರೀಕ್ಷೆಯಿಂದ ಕಲ್ಲಂಗಡಿ ಬೆಳೆದಿದ್ದ ರೈತರಿಗೆ ಈ ಮಳೆ ಕಂಟಕವೇ ಆಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಯಥೇಚ್ಛವಾಗಿ ಕಲ್ಲಂಗಡಿ ಬೆಳೆಯಲಾಗಿತ್ತು. ಆದರೆ ಕೊರೊನ ಮಹಾಮಾರಿ ಬಂದಿದ್ದರಿAದ ಎಷ್ಟೋ ರೈತರು ಹಣ್ಣುಕೊಯ್ಲಿಗೆ ಹೊಲಕ್ಕೇ ಬರಲಿಲ್ಲ. ಸಾಗರ ಹಾಗೂ ಹೊಸನಗರ ತಾಲೂಕಿನ ರೈತರು ಕಳೆದ ಸಾಲಿನಲ್ಲಿ ತುಂಬಾ ನಷ್ಟ ಅನುಭವಿಸಿದ್ದರು.
ಈ ಬಾರಿ ಕಲ್ಲಂಗಡಿ ಬೆಳೆ ಕಡಿಮೆ ಇದ್ದುದರಿಂದ ರೈತರು ಬಂಪರ್ ಬೆಲೆ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಒಂದೆರಡು ದಿನಗಳಿಂದ ಅಲ್ಲಲ್ಲಿ ಬೀಳುತ್ತಿರುವ ಮಳೆ ತೊಂದರೆ ಮಾಡುತ್ತಿದೆ. ಈ ಬಾರಿಯೂ ಕೊರೊನ ಅಟ್ಟಹಾಸ ಮುಂದುವರಿದಿರುವುದರಿAದ ಕಲ್ಲಂಗಡಿ ಮಾರುಕಟ್ಟೆಯದೇ ಸಮಸ್ಯೆಯಾಗುವ ಸಾದ್ಯತೆಯಿದೆ.
ಶಿವಮೊಗ್ಗದಲ್ಲಿ ಸಿಡಿಲು
ಕೊರೊನ ಅಟ್ಟಹಾಸ ಮುಂದುವರಿದಿರುವ ಬೆನ್ನಲೇ ಭಾನುವಾರ ಸಂಜೆ ಸುರಿದ ಮಳೆಯೊಂದಿಗೆ ಸಿಡಿಲಬ್ಬರವೂ ಜೋರಾಗಿತ್ತು. ಮಹಾವೀರ ಸರ್ಕಲ್ ದರ್ಗಾ ಆವರಣದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದರಿಂದ ಮರ ಹೊತ್ತಿಉರಿಯಿತು. ಮಳೆಯಿಂದಾಗಿ ಶಿವಮೊಗ್ಗದ ಬಹುತೇಕ ಕಡೆ ಚರಂಡಿ ಬ್ಲಾಕ್ ಆಗಿರುವ ದೃಶ್ಯ ಕಂಡು ಬಂತು. ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತಿರುವುದರಿಂದ ಈ ಅವಾಂತರ ಸೃಷ್ಟಿಯಾಗಿತ್ತು.