Malenadu Mitra
ರಾಜ್ಯ ಶಿವಮೊಗ್ಗ

ಜಲ ಮೂಲಗಳ ಸಂರಕ್ಷಣೆಯಿಂದ ಅಂತರ್ಜಲ ಅಭಿವೃದ್ಧಿ: ಕೆ.ಬಿ ಅಶೋಕ್ ನಾಯ್ಕ್.

ಇತ್ತೀಚಿನ ದಿನಗಳಲ್ಲಿ ನೀರಿನ ಜಲಗಳು ಕಣ್ಮರೆಯಾಗಿ ನೀರಿನ ಅಭಾವ ಹೆಚ್ಚಾಗಿ ತುಂಬಾ ಸಂಕಷ್ಟದ ದಿನಗಳನ್ನ ಎದುರಿಸುತ್ತಿದ್ದೇವೆ. ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಶಿವಮೊಗ್ಗ ಗಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ್ ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಶಿವಮೊಗ್ಗ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪಿಳ್ಳಂಗೆರೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಲಶಕ್ತಿ ಸಂರಕ್ಷಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪರವರಿಂದ ಚಾಲನೆಗೊಂಡ ಜಿಲ್ಲಾ ಮಟ್ಟದ ಜಲಶಕ್ತಿ ಅಭಿಯಾನದಡಿ ಕಲ್ಯಾಣಿ ಕಾಮಗಾರಿ ಪುನಶ್ಚೇತನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾನೆ. ಈ ಸಂದರ್ಭದಲ್ಲಿ ಜಲ ಸಂಪೂರ್ಣವಾಗಿ ಭೂಮಿಯ ತಳಭಾಗವನ್ನು ಸೇರುತ್ತಿದೆ, ಆಳವಾಗಿ ಕೊಳವೆ ಬಾವಿಗಳನ್ನ ಕೊರೆದರೂ ನೀರು ಲಭ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ ಹಾಗಾಗಿ ಜಲ ಮೂಲಗಳನ್ನು ರಕ್ಷಿಸಬೇಕು, ಮುಂದಿನ ಪೀಳಿಗೆಯನ್ನು ನೀರಿನ ಮೂಲಗಳನ್ನ ಸಂರಕ್ಷಿಸಬೇಕು. ನೀರಿನ ಜರಿಗಳನ್ನ, ಕೆರೆಗಳನ್ನ, ಸಂರಕ್ಷಿಸಬೇಕು. ಇದು ನಮ್ಮ ಆದ್ಯ ಕರ್ತವ್ಯ, ಇದು ಮುಂದಿನ ಪೀಳಿಗೆಗೆ ಸಂದೇಶವನ್ನು ನೀಡಿದಂತಾಗುತ್ತದೆ. ಹಾಗಾಗಿ ನಾವೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಇವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಶಾಸಕರು ಮನವಿ ಪತ್ರವನ್ನು ಸ್ವೀಕರಿಸಿದರು.


ಜಿಲ್ಲೆಯಲ್ಲಿ 865 ಚಿಕ್ಕ ಚಿಕ್ಕ ಜಲ ಮೂಲಗಳನ್ನು ಗುರುತಿಸಲಾಗಿದ್ದು ಕುಂಟೆ, ಗೋಕಟ್ಟೆ, ಕಟ್ಟೆ, ಕೆರೆ, ಕಲ್ಯಾಣಿ ಇವುಗಳನ್ನ ಗುರುತಿಸಿ ಸ್ವಚ್ಚಗೊಳಿಸಿ “ಕ್ಯಾಚ್ ದಿ ರೈನ್” ವೆನ್ ಇಟೀಸ್, ವೇರ್ ಇಟ್ ಈಸ್, ತತ್ವದೊಂದಿಗೆ ಕೇಂದ್ರ ಸರ್ಕಾರದ ಪ್ರಸ್ತುತ ಯೋಜನೆಯಾಗಿದ್ದು ಮಳೆ ನೀರನ್ನು ಆದಷ್ಟು ಜಲಮೂಲಗಳನ್ನು ಶುಚಿಗೊಳಿಸಿ ಹಿಡಿದಿಟ್ಟುಕೊಲ್ಲುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಯವರ ಉತ್ತಮ ಜೀವನಕ್ಕೆ ದಾರಿ ಕಲ್ಪಿಸಬೇಕು, ಈಗಾಗಲೇ ಜಿಲ್ಲೆ ಎಲ್ಲಾ ತಾಲ್ಲೂಕುಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಉದ್ಘಾಟನೆ ಮಾಡಲಾಗಿದ್ದು ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್ ವೈಶಾಲಿಯವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಕೆ.ಈ ಕಾಂತೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಗೀತಾ ಜಯಶೇಖರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಲ್ಲಣ್ಣ, ತಾಲ್ಲೂಕು ಪಂಚಾಯತಿ ಸದಸ್ಯೆ ವನಜಾಕ್ಷಿ ಸುರೇಶ್, ಪಿ.ಡಿ.ಓ ಹಾಲೇಶ್, ಸಿ.ಪಿ.ಓ ಉಮಾ ಸದಾಶಿವ, ಪಿಳ್ಳಂಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಕೆ. ನಿರ್ಮಲಾ ಉಪಸ್ಥಿತರಿದ್ದರು.

Ad Widget

Related posts

ಸೊರಬದಲ್ಲಿ ಸೋದರರ ಸವಾಲಿಲ್ಲ, ಪಕ್ಷಗಳ ನಡುವೆ ಹೋರಾಟ: ಮಧು ಬಂಗಾರಪ್ಪ

Malenadu Mirror Desk

ಶಿವಮೊಗ್ಗದಲ್ಲಿ 720 ಮಂದಿಗೆ ಸೋಂಕು, 5 ಸಾವು

Malenadu Mirror Desk

ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವ ಈಶ್ವರಪ್ಪರ ಕೊಡುಗೆ ಶೂನ್ಯ , ಶಿವಮೊಗ್ಗದಲ್ಲಿ ಆಸ್ತಿ ಮಾಡಿದ್ದೇ ಅವರ ಹೆಗ್ಗಳಿಕೆ ಎಂದ ಮಾಜಿ ಶಾಸಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.