ಶಿವಮೊಗ್ಗ, ಏ.೨೦: ಯಾವ ರಾಜಕಾರ ಣಿಗಳ ಒತ್ತಡಕ್ಕೂ ಮಣಿಯುವುದಿಲ್ಲ. ರಾಜ ಕಾರಣಿಗಳ ಒತ್ತಡಕ್ಕೆ ಮುಂಚೆಯೇ ಎಫ್‌ಐ ಆರ್ ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತದೆ ಎಂದು ನೂತನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಹೇಳಿದರು.
ಪ್ರೆಸ್ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಜನರು ಈಗಲೂ ಕೂಡ ಪೊಲೀಸರೆಂದರೆ ಭಯ ಪಡುತ್ತಾರೆ. ಇದು ಬದಲಾಗಬೇಕಾಗಿದೆ. ಸ್ವಾತಂತ್ರ್ಯದ ನಂತರ ಪೊಲೀಸ್ ಇಲಾಖೆಯಲ್ಲಿ ಅನೇಕ ಬದಲಾವಣೆಗಳಾಗಿವೆ, ಕಾಯ್ದೆಗಳು ಬದಲಾಗಿ ದ್ದರೂ ಕೂಡ ಬಹುತೇಕ ವ್ಯವಸ್ಥೆ ಬ್ರಿಟೀಷರ ಕಾಲದ್ದೇ ಇದೆ ಎಂದರು.
ಇಲಾಖೆಯನ್ನು ಜನಸ್ನೇಹಿಯಾಗಿ ಮಾಡುವತ್ತ ಇಲಾಖೆ ಶ್ರಮಿಸುತ್ತಲೇ ಇದೆ. ಆಗಾಗ ಜನರೊಂದಿಗೆ ಸಂವಾದಗಳನ್ನು ಮಾಡುತ್ತ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಇರುವ ಕಂದಕವನ್ನು ದೂರ ಮಾಡಲಾಗುತ್ತಿದೆ. ಕೆಳ ಹಂತದ ಸಿಬ್ಬಂದಿಗಳು ಆಗಾಗ ತರಬೇತಿ ಸಂವಾದಗಳನ್ನು ಏರ್ಪಡಿಸಿ ಸಾಮಾನ್ಯ ಜನರೊಂದಿಗೆ ಹೇಗೆ ಬೆರೆಯ ಬೇಕು ಎಂಬುದನ್ನು ತಿಳಿಸುತ್ತಾ ಬಂದಿರುವು ದರಿಂದ ಈಗ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ.
ಇತ್ತೀಚೆಗೆ ನಡೆದ ಹುಣಸೋಡು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯಿಂದ ತನಿ ಖೆಯ ದಿಕ್ಕು ತಪ್ಪಿಲ್ಲ. ಎಲ್ಲಿಂದ ಸ್ಫೋಟಕ ವಸ್ತುಗಳು ಸರಬರಾಜಾಗಿವೆ ಎನ್ನುವುದರಿಂದ ಹಿಡಿದು ಇಲಾಖೆ ತನಿಖೆ ನಡೆಸುತ್ತಿದೆ. ಯಾರನ್ನು ಆರೋಪದಿಂದ ಮುಕ್ತ ಮಾಡುವ ಉದ್ದೇಶ ಪೊಲೀಸ್ ಇಲಾಖೆಗೆ ಇಲ್ಲ. ರಾಜಕಾರಣಿಗಳ ಒತ್ತಡವೂ ಇಲ್ಲ. ಆದರೂ ಕೆಲವು ಆರೋಪಗಳು ಕೇಳಿ ಬರುತ್ತಿರುವುದು ನಿಜ. ಈ ನಿಟ್ಟಿನಲ್ಲೂ ಕೂಡ ಪೊಲೀಸ್ ಇಲಾಖೆ ತನಿಖೆ ನಡೆಸುತ್ತದೆ ಎಂದರು.
ಶಿವಮೊಗ್ಗದಲ್ಲಿ ಗಾಂಜಾ, ರೌಡಿಸಂ, ಸರಗಳ್ಳತನ, ಮುಂತಾದ ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇವೆ. ಇವುಗಳನ್ನು ತಡೆಯಲು ಇಲಾಖೆ ಸದಾ ಎಚ್ಚರಿಕೆಯಿಂದ ಇರುತ್ತದೆ. ಮುಖ್ಯವಾಗಿ ಯುವ ಜನಾಂಗ ಡ್ರಗ್ಸ್, ದುಶ್ಚಟಕ್ಕೆ ಅಂಟಿಕೊಂ ಡಿದ್ದಾರೆ. ಇದರಿಂದ ಸಣ್ಣ ಪುಟ್ಟ ಕಳ್ಳತನದಂತಹ ಘಟನೆಗಳು ಕೂಡ ನಡೆಯುತ್ತಿವೆ. ಅಲ್ಲಲ್ಲಿ ಹದಿಹರಿಯದ ಮಕ್ಕಳು ಕೂಡ ರೌಡಿಸಂ ನಂತಹ ಚಟುವಟಿಕೆಗೆ ಕಾಲಿಡುತ್ತಿದ್ದಾರೆ ಎಂದರು.
ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ತುಂಬಾ ಕ್ಷೀಣಿಸಿದೆ. ೨೦೧೫ರಲ್ಲಿ ಕೊನೆಯ ನಕ್ಸಲ್ ಪ್ರಕರಣ ದಾಖಲಾಗಿತ್ತು. ಅದು ಬಿಟ್ಟರೆ ಇಲ್ಲಿಯವರೆಗೆ ನಕ್ಸಲ್ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಸುದ್ದಿಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂವಾದದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು.