ಶಿವಮೊಗ್ಗ ಲಯನ್ ಸಫಾರಿಯಲ್ಲಿ 650 ಎಕರೆ ಪ್ರದೇಶದಲ್ಲಿ ಭಾರತೀಯ ಮೃಗಾಲಯ ಪ್ರಾಧಿಕಾರದಿಂದ 10ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಗರದ ತ್ಯಾವರೆಕೊಪ್ಪ ಹುಲಿ ಸಿಂಹಧಾಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಬಿ.ವೈ.ರಾಘವೇಂದ್ರ ಇಂದು ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಖಾಸಗಿಯವರ ಸಹಕಾರ ದಿಂದಲೂ ಇನ್ನಷ್ಟು ಕಾರ್ಯಕ್ರಮ ಗಳನ್ನು ರೂಪಿಸಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ತುಂಗಾ ನದಿಯಿಂದ ಲಯನ್ ಸಫಾರಿಗೆ ನೀರು ಒದಗಿಸಲು ನೆರವು ನೀಡಿದ್ದಾರೆ. ಬೇಸಿಗೆಯಲ್ಲಿಯೂ ಇಲ್ಲಿಗೆ ತುಂಗಾ ನದಿಯಿಂದ ನೀರು ಪೂರೈಕೆಯಾಗಲಿದೆ. ಹೊಸದಾಗಿ ಅನೇಕ ಪ್ರಾಣಿಗಳು, ಅಪರೂಪದ ಪಕ್ಷಿಗಳನ್ನು ತರುವ ಯೋಜನೆಯಿದೆ ಎಂದು ತಿಳಿಸಿದರು.
ಸಕ್ರೆಬೈಲು, ಆನೆಬಿಡಾರದಲ್ಲಿ 20ಕೋಟಿ. ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಶಿಕಾರಿಪು ರದಲ್ಲಿ ಅಕ್ಕಮಹಾದೇವಿ ಜನ್ಮಸ್ಥಳವನ್ನು ಅಕ್ಷರಧಾಮ ಮಾದರಿಯಲ್ಲಿ ಅಭಿವೃ ದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜೋಗ್‌ಫಾಲ್ಸ್ ನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ವರ್ಷ ಪೂರ್ತಿ ಜೋಗಜಲಪಾತ ನೋಡಲು ಪ್ರವಾಸಿ ಗರು ಬರುವಂತೆ ವ್ಯವಸ್ಥೆ ಮಾಡಲಾ ಗುವುದು. ಪ್ರತಿದಿನ 20ಸಾವಿರ ಪ್ರವಾಸಿಗರನ್ನು ಸೆಳೆಯುವ ಉದ್ದೇಶವಿದೆ ಎಂದರು.
ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವ ಸ್ವಾಮಿ. ಎನ್.ಜೆ.ರಾಜಶೇಖರ್, ಡಿಎಫ್‌ಒ ಮುಕುಂದ್ ಚಂದ್ರ ಮೊದಲಾದವರಿದ್ದರು.