ಕೋವಿಡ್ ಮಾರ್ಗಸೂಚಿಯನ್ವಯ ಶಿವಮೊಗ್ಗದಲ್ಲಿ ಬುಧವಾರ ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಸಾರ್ವಜನಿಕರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಅಂತಹ ಬಿಗಿಕ್ರಮ ಇರುವುದಿಲ್ಲ ಎಂದೇ ತಿಳಿದಿದ್ದ ಸಾರ್ವಜನಿಕರು ಸಂಜೆ ಏಳು ಗಂಟೆಯಿಂದಲೇ ಪೊಲೀಸರು ನೀಡುತ್ತಿದ್ದ ಸೂಚನೆಗಳಿಗೆ ಪ್ರತಿಸ್ಪಂದಿಸಿದರು.
ರಾತ್ರಿ ಎಂಟೂವರೆ ಹೊತ್ತಿಗೆ ವಹಿವಾಟುದಾರರು ತಮ್ಮ ಅಂಗಡಿ ಮುಂಗಟ್ಟು ಬಾಗಿಲು ಹಾಕುತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಆಸ್ಪತ್ರೆ , ಮೆಡಿಕಲ್ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವಹಿವಾಟುಗಳು ರಾತ್ರಿ ಬೇಗನೇ ಸ್ಥಗಿತಗೊಂಡವರು. ಪೊಲೀಸ್ ವಾಹನಗಳು ನಗರದೆಲ್ಲೆಡೆ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ನಿರತವಾಗಿದ್ದವು.
previous post
next post