ಭಾರತದ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠವು ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿ ಸದ್ರಿ ದೇವಸ್ಥಾನದ ಆಡಳಿತವು ಇನ್ನು ಮುಂದೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಬಿ.ಎನ್. ಶ್ರೀಕೃಷ್ಣ ರವರ ಅಧ್ಯಕ್ಷತೆಯಲ್ಲಿ ನಡೆಯಬೇಕು ಸೇರಿದಂತೆ ೧೫ ದಿನಗಳೊಳಗಾಗಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಉಸ್ತುವಾರಿಯನ್ನು ಶ್ರೀಕೃಷ್ಣರವರ ಸಮಿತಿಗೆ ಹಸ್ತಾಂತರಿಸಬೇಕೆಂದು ಮಾಡಿರುವ ಆದೇಶವನ್ನು ಅಖಿಲ ಹವ್ಯಕ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಕೀಲ ಅಶೋಕ್ ಜಿ. ಭಟ್ ಸ್ವಾಗತಿಸಿದ್ದಾರೆ
ಈ ಸಂಬಂಧ ಪತ್ರಿಕಾ ಹೇಳೀಕೆ ನೀಡಿರುವ ಅವರು ಈ ಹಿಂದೆ ಅರ್ಜಿದಾರ ಮಠವು ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ, ರಿಟ್ ಅರ್ಜಿ ಸಲ್ಲಿಸಿದ್ದು, ಈಗಿನ ಆದೇಶದಿಂದಾಗಿ ಶ್ರೀಮಹಾಬಲೇಶ್ವರ ದೇವಸ್ಥಾನದ ಭಕ್ತಾದಿಗಳಿಗೂ, ಟ್ರಸ್ಟೀ ಸದಸ್ಯರುಗಳಿಗೂ ಮತ್ತು ಉಪಾಧಿವಂತರಿಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದಾಗಿ ವಿಜಯಸಿಕ್ಕಂತಾಗಿದೆ.
ರಾಜ್ಯ ಸರಕಾರವು ಕೆಲವೊಂದು ಅಧಿಸೂಚಿತ ದೇವಸ್ಥಾನಗಳು, ಗೋಕರ್ಣ ಮಹಾಬಲೇಶ್ವರ ದೇವಸ್ಥಾನವೂ ಸೇರಿದಂತೆ, ಮೇಲ್ಕಂಡ ಕಾಯಿದೆಗೆ ಒಳಪಡುತ್ತದೆಂದು ಒಂದು ಅಧಿಸೂಚನೆ ಘೋಷಿಸಲಾಗಿತ್ತು. ಆನಂತರ ಅರ್ಜಿದಾರ ಮಠದವರು ಸರಕಾರಕ್ಕೆ ಒಂದು ಮನವಿಯನ್ನು ನೀಡಿ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಮೇಲ್ಕಂಡ ಅಧಿಸೂಚನೆಯಿಂದ ಹೊರಗಿಡಬೇಕೆಂದು ಮತ್ತು ಸದ್ರಿ ದೇವಸ್ಥಾನವು ಶ್ರೀಮಠಕ್ಕೆ ಸಂಬಂಧ ಪಟ್ಟಿದ್ದಾಗಿದ್ದು 1992ರ ಮೇಲ್ಕಂಡ ಕಾಯಿದೆಯ ಕಲಂ-1(4) ಇದರ ಪ್ರಕಾರ 1997ರ ಕಾಯಿದೆಯಡಿ ಸದ್ರಿ ದೇವಸ್ಥಾನವು ಬರುವುದಿಲ್ಲವೆಂದು ವಾದಿಸಿದ್ದು ನಂತರದಲ್ಲಿ ರಾಜ್ಯ ಸರಕಾರವು 12-08-2008ರ ಜಿ.ಓ. ಮೂಲಕ 30-04-2003ರ ಅಧಿಸೂಚನೆಯಲ್ಲಿನ ಪಟ್ಟಿಯಿಂದ ಮೇಲ್ಕಂಡ ಗೋಕರ್ಣ ದೇವಸ್ಥಾನವನ್ನು ಕೈಬಿಟ್ಟಿತ್ತು ಹಾಗೂ ದೇವಸ್ಥಾನದ ಉಸ್ತುವಾರಿಯನ್ನು ಶ್ರೀಮಠಕ್ಕೆ ವಹಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.ಕಳೆದ 2008ರ ಅಧಿಸೂಚನೆಯಂತೆ ಶ್ರೀಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಹೊರಗಿಟ್ಟು ಅದರ ಉಸ್ತುವಾರಿಯನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟಿದ್ದನ್ನು ಸಾರ್ವಜನಿಕ ಹಿತಾಸಕ್ತಿ ದಾವೆಯ ಮೂಲಕ, ದೇವಸ್ಥಾನದ ಭಕ್ತಾದಿಗಳು ಹಾಗು ಟ್ರಸ್ಟಿ ಸದಸ್ಯರುಗಳು ಮಾನ್ಯ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಅದರಲ್ಲಿ 2008ರ ಸರಕಾರಿ ಆದೇಶವನ್ನು ರದ್ದುಗೊಳಿಸಲಾಗಿತ್ತು, ಮತ್ತು ಸದ್ರಿ ದೇವಸ್ಥಾನವು 1992ರ ಕಾಯ್ದೆಯಡಿ ಅಧಿಸೂಚಿತ ಪಟ್ಟಿಯಲ್ಲಿ ಮುಂದುವರೆಯುವಂತಾಯಿತು.
ಸದ್ರಿ ದೇವಸ್ಥಾನವು ಶ್ರೀಮಠಕ್ಕೆ ಸೇರಿದೆಯೇ ಅಥವಾ ಇಲ್ಲವೇ ಎಂಬ ವಿಚಾರವನ್ನು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕಾದ್ದರಿಂದ ಈ ಹಿಂದೆ ವಿಭಾಗೀಯ ಪೀಠದಲ್ಲಿ ಮಾಡಲಾದ ಆದೇಶದ ಪ್ರಕಾರ ಒಂದು ಸಮಿತಿಯನ್ನು ರಚಿಸಿದ್ದು, ಸದ್ರಿ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲುಮಾಡಿದ್ದು, ಈ ಅರ್ಜಿಯಲ್ಲಿ ಸದರಿ ದೇವಸ್ಥಾನದ ಉಸ್ತುವಾರಿಯನ್ನು ಮಾನ್ಯ ಬಿ.ಎನ್. ಶ್ರೀಕೃಷ್ಣ ಇವರ ಸಮಿತಿಗೆ ವಹಿಸಿಕೊಡಬೇಕೆಂದು ಆದೇಶವಾಗಿರುತ್ತದೆ.
ಈ ಆದೇಶವನ್ನು ಭಕ್ತಾದಿಗಳು, ಟ್ರಸ್ಟಿ ಸದಸ್ಯರು ಹಾಗೂ ಅಖಿಲ ಹವ್ಯಕ ಒಕ್ಕೂಟದ ಎಲ್ಲಾ ಸದಸ್ಯರೂ ಸದರಿ ಆದೇಶವನ್ನು ಸ್ವಾಗತಿಸಿ, ಪ್ರತಿವಾದಿಗಳ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ನಾಗಾನಂದ ಅವರಿಗೆ ಅಭಿನಂದಿಸಿದ್ದಾರೆ.
previous post
next post