ರಾಜ್ಯದಲ್ಲಿ ಕೊರೊನಾ ಉಲ್ಬಣಿಸಿ ಮಾರಕವಾಗಿ ಹಬ್ಬುತಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ನೆಡೆಸುತಿರುವ ಚುನಾವಣೆಗಳನ್ನು ಮುಂದೂಡುವಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿದ ಕರ್ಫೂ,ವಾರಾಂತ್ಯ ಕರ್ಫ್ಯೂ ನಿರ್ಬಂಧಗಳ ನಡುವೆಯು ಕೊರೊನಾ ನಿಯಂತ್ರಣವಾಗುತ್ತಿಲ್ಲ.ಆದರೆ ಇಂತಹ ಸಮಯದಲ್ಲಿ ಚುನಾವಣೆಯ ಅವಶ್ಯಕತೆ ಇದೆಯೆ? ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೊರೊನಾ ಭಾಧಿಸುವುದಿಲ್ಲವೇ ಎಂದು ಪ್ರೆಶ್ನಿಸಿದ್ದಾರೆ.
ಈ ಕೊರೋನಾ ಆತಂಕದ ಪ್ರದೇಶಗಳು ಕರ್ನಾಟಕದಲ್ಲಿದೆಯೊ? ಚಂದ್ರಲೋಕದಲ್ಲಿದೆಯೊ?ಮನೆ ಮನೆಗೆ ಅಭ್ಯರ್ಥಿಗಳು,ಬೆಂಬಲಿಗರು ಮತ ಕೇಳಲು ಹೋದಾಗ ಕೊರೊನಾ ಹರಡುವ ಅಪಾಯ ಹೆಚ್ಚಿದೆ.ಕೊರೊನಾ ಚುನಾವಣೆಗೆ ಹೆದುರುತ್ತದೋ ಎಂದು ಪ್ರೆಶ್ನಿಸಿದ್ದಾರೆ.
ರಾಜ್ಯದ ಈ ಕಠಿಣ ಸಮಯದಲ್ಲಿ ಸರ್ಕಾರಗಳ ಹಠಕ್ಕಿಂತ ಜನರ ಜೀವ,ಜೀವನ ಮುಖ್ಯ,ಕೂಡಲೇ ಈ ಗಂಭೀರ ವಿಷಯವನ್ನು ಮನಗೊಂಡು ಹಾಲಿ ನೆಡೆಸುತಿರುವ ಚುನಾವಣಾ ಪ್ರಕ್ರಿಯೆಗಳನ್ನು ಮುಂದೂಡಬೇಕೆಂದು ಚುನಾವಣಾ ಆಯುಕ್ತರಿಗೆ,ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.