ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಬೀದಿ ಬದಿ ವ್ಯಾಪಾರಿಗಳಾದ ನಾವು ಬಡವರಾಗಿದ್ದು, ಜೀವನ ನಿರ್ವಹಣೆಗಾಗಿ ತಿಂಡಿ ವ್ಯಾಪಾರ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದೇವೆ. ಈ ವ್ಯಾಪಾರ ಮಾಡಲು ನಿರ್ಭರ ಯೋಜನೆಯಿಂದ ಸಾಲ ಕೂಡ ಮಾಡಿದ್ದೇವೆ. ಈ ಉದ್ಯೋಗ ಬಿಟ್ಟು ತಮಗೆ ಯಾವ ಉದ್ಯೋಗವು ಇಲ್ಲ. ಸರ್ಕಾರ ಈಗ ಕೋವಿಡ್ ೨ನೇ ಸಂದರ್ಭದಲ್ಲಿ ಮಾರ್ಗಸೂಚಿ ಹೊರಡಿಸಿ ತಿಂಡಿ ಗಾಡಿಗಳಿಗೆ ಅವಕಾಶ ನೀಡಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗಿದೆ ಎಂದು ತಿಳಿಸಿದರು.
ದೊಡ್ಡ ದೊಡ್ಡ ಐಶರಾಮಿ ಹೋಟೆಲ್‌ಗಳಲ್ಲಿ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಇದೇ ರೀತಿ ತಿಂಡಿ ಗಾಡಿಗಳಿಂದಲೂ ಕೂಡ ಪಾರ್ಸಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು. ನಾವು ಕೂಡ ಪಾರ್ಸಲ್ ನೀಡುತ್ತೇವೆ. ಇದರಿಂದ ಬಡ ಕೂಲಿ ಕಾರ್ಮಿಕರಿಗೂ ಅನುಕೂಲವಾಗುತ್ತದೆ. ಐಶರಾಮಿ ಹೋಟೆಲ್‌ಗಳಲ್ಲಿ ದುಬಾರಿ ಬೆಲೆ ತಿಂಡಿ ಖರೀದಿಸಲು ಕೆಲವರು ಅಸಮರ್ಥರಾಗಿದ್ದಾರೆ. ಹಾಗಾಗಿ ನಮಗೂ ಕೂಡ ಪಾರ್ಸಲ್ ವ್ಯವಸ್ಥೆ ಮಾಡಿಕೊಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಚನ್ನವೀರಪ್ಪ ಗಾಮನಗಟ್ಟಿ, ಮಹೇಶ್, ಅಯ್ಯಪ್ಪ, ನವೀನ್ ಸೇರಿದಂತೆ ಹಲವರಿದ್ದರು.