Malenadu Mitra
ರಾಜ್ಯಶಿವಮೊಗ್ಗ

ಸಹ್ಯಾದ್ರಿ ಕ್ಯಾಂಪಸ್ ಹಸ್ತಾಂತರ ಬೇಡ: ಎನ್.ಎಸ್.ಯು.ಐ

ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಕ್ಯಾಂಪಸ್‍ನಲ್ಲಿ ಉದ್ದೇಶಿತ ಕ್ರೀಡಾ ತರಬೇತಿ ಕೇಂದ್ರಕ್ಕೆ ಅವಕಾಶ ನೀಡಬಾದೆಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ ಅವರಿಗೆ ಎನ್.ಎಸ್.ಯ.ಐ ಕಾರ್ಯಕರ್ತರು ಮನವಿ ಸಲ್ಲಿಸಿದರು.


ಮಂಗಳವಾರ ಸಹ್ಯಾದ್ರಿ ಕಾಲೇಜಿಗೆ ಭೇಟಿ ನೀಡಿದ್ದ ಕುಲಪತಿಗಳನ್ನು ಭೇಟಿ ಮಾಡಿದ ಕಾರ್ಯಕರ್ತರು, ಮೂರು ಕಾಲೇಜುಗಳ ಉಪಯೋಗಕ್ಕೆ ಹಾಗೂ ಭವಿಷ್ಯದ ದೃಷ್ಟಿಯಿಂದ ಕಾಲೇಜಿನ ಆಸ್ತಿ ಉಳಿಯಬೇಕಿದೆ. ಖೇಲೋ ಇಂಡಿಯಾ ಯೋಜನೆಯಡಿ ಅನುದಾನ ಬಂದಿದ್ದರೆ, ನಗರದ ಹೊರವಲಯದಲ್ಲಿ ತರಬೇತಿ ಕೇಂದ್ರ ತೆರೆಯಲಿ. ಯಾವುದೇ ಕಾರಣಕ್ಕೂ ಸಹ್ಯಾದ್ರಿ ಕ್ಯಾಂಪಸ್‍ನಲ್ಲಿ ಅವಕಾಶ ನೀಡಬಾರದು. ಒಂದು ವೇಳೆ ಭೂಮಿ ಹಸ್ತಾಂತರ ಮಾಡಿದ್ದೇ ಆದರೆ ಉಗ್ರ ಹೋರಾಟ ಮಾಡುವುದಾಗಿ ಮನವಿಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಮುಖಂಡರಾದ ಕಾಶಿ ವಿಶ್ವನಾಥ್, ಎನ್.ಎಸ್‍ಯುಐ ಅಧ್ಯಕ್ಷ ಬಾಲಾಜಿ,ಪ್ರಮುಖರಾದ ರವಿ, ವಿಜಯ್, ವಿನಯ್, ಗಿರಿ, ಭರತ್, ಚಂದ್ರೋಜಿ,ಸಂದೇಶ್,ಪ್ರಮೋದ್, ಮಂಜು,ರವಿ, ಪ್ರಾಚಾರ್ಯರಾದ ಡಾ.ವಾಗ್ದೇವಿ, ಡಾ.ಧನಂಜಯ ಹಾಗೂ ಕೆ.ಎಂ.ವೀಣಾ ಮತ್ತಿತರರಿದ್ದರು.

Ad Widget

Related posts

ಹಿನ್ನೀರಿಗೆ ಹಾರಿ ಮಹಿಳೆ ರಕ್ಷಿಸಿದ ಪ್ರಕಾಶ್ ಗೆ ಪ್ರಶಸ್ತಿ ಕೊಡಬೇಕು: ಚೇತನರಾಜ್ ಕಣ್ಣೂರು

Malenadu Mirror Desk

ಮಳೆಗಾಲ ಪೂರ್ವದಲ್ಲಿ ಸಣ್ಣ ಜಲಮೂಲಗಳ ದುರಸ್ತಿ: ಸಿಇಒ ವೈಶಾಲಿ

Malenadu Mirror Desk

ಅದ್ದೂರಿ ಮೆರವಣಿಗೆ, ಹಲವರ ನಾಮಪತ್ರ
ನಮ್ಮದೇ ಗೆಲುವು ಎಂದ ಅಭ್ಯರ್ಥಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.