Malenadu Mitra
ರಾಜ್ಯ ಶಿವಮೊಗ್ಗ

ವಿಶೇಷ ಭತ್ಯೆಗೆ ಆಯುಷ್ ವೈದ್ಯಾಧಿಕಾರಿಗಳ ಮನವಿ

ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ವಿಸ್ತರಿಸಬೇಕೆಂದು ಆಯುಷ್ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಜಿಲ್ಲಾಘಟಕ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಸರಿಸಮನಾದ ಭತ್ಯೆ ಮತ್ತು ಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ನೀಡಬೇಕೆಂದು ಸರಕಾರ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿದೆ.

ಕಳೆದ ವರ್ಷ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಭತ್ಯೆ ನೀಡಿರುವುದು ಅಸಮಂಜಸವಾಗಿದೆ. ಕೊರೊನ ಸಂದರ್ಭದ ಸಂಕಷ್ಟದಲ್ಲಿ ಆಯುಷ್ ವೈದ್ಯರು ಅಲೋಪಥಿ ವೈದ್ಯರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಕೇರ್ ಕೇಂದ್ರ,ತಪಾಸಣಾ ಕೇಂದ್ರ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸೌಲಭ್ಯಗಳ ವಿಚಾರದಲ್ಲಿ ಸರಕಾರ ತಾರತಮ್ಯ ಮಾಡಿರುವುದು ಸರಿಯಲ್ಲ. ಎಂ.ಬಿ.ಬಿ.ಎಸ್ ಹಾಗೂ ಬಿಡಿಎಸ್ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ಪರಿಷ್ಕರಿಸುವ ವೇಳೆ ಆಯುಷ್ ವೈದ್ಯರ ಸೇವೆಯನ್ನು ನಗಣ್ಯ ಮಾಡಲಾಗಿದೆ. ಈ ಮೂಲಕ ಸರಕಾರ ಆಯುಷ್ ವೈದ್ಯರ ನೈತಿಕ ಸ್ಥೈರ್ಯ ಕುಗ್ಗಿಸುವಂತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಆಯುಷ್ ವೈದ್ಯರು ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಹಲವು ಆದೇಶಗಳನ್ವಯವೇ ಇಲಾಖೆ ಕೆಲಸ ಮಾಡಿದೆ. ಆದರೆ ಭತ್ಯೆ ಕೊಡುವಾಗ ಆಯುಷ್ ವೈದ್ಯಾಧಿಕಾರಿಗಳನ್ನು ಕಡೆಗಣಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಸಂಘ ಹೇಳಿದೆ.

ಹೋರಾಟ ಅನಿವಾರ್ಯ


ಸಂಕಷ್ಟದ ಸಂದರ್ಭದಲ್ಲಿ ಸರಕಾರದ ಮೇಲೆ ಯಾವುದೇ ಒತ್ತಡ, ಮುಷ್ಕರ ಇತ್ಯಾದಿ ಮಾರ್ಗ ಹಿಡಿಯದೆ ಸಮಾಜದ ಸ್ವಾಸ್ತ್ಯ ಕಾಯುವಲ್ಲಿ ಆಯುಷ್ ವೈದ್ಯರು ತಮ್ಮ ಕಾಯಕ ಮುಂದುವರಿಸಿದ್ದಾರೆ. ಸರಕಾರ ಕೂಡಲೇ ವೈದ್ಯ ಸಮೂಹದಲ್ಲಿ ಭೇದವೆಣಿಸದೆ ಸಮಾನ ಭತ್ಯೆಯನ್ನು ಕೊಡಬೇಕು. ಆಯುಷ್ ವೈದ್ಯಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನು ಹದಿನೈದು ದಿನಗಳಲ್ಲಿ ಈಡೇರಿಸಬೇಕು. ಇಲ್ಲದಿದ್ದಲ್ಲಿ  ಸಂಘವು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಸರಕಾರಿ ನೌಕರರ ಸಂಘದ ಜಂಟಿಕಾರ್ಯದರ್ಶಿ ಡಾ.ಸಿ.ಎ.ಹಿರೇಮಠ, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಸಂಗದ ಅಧ್ಯಕ್ಷ  ಡಾ.ಸತೀಶ್ ಆಚಾರ್ಯ ,ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಜೆ.ವೀರಣ್ಣ, ಡಾ.ಕುಮಾರ್ ಸಾಗರ್, ಡಾ.ರವಿರಾಜ್ ,ಡಾ.ಸತೀಶ್ ಮತ್ತಿತರರು ಹಾಜರಿದ್ದರು ಮನವಿ ಸ್ವೀಕರಿಸಿದ ಎಡಿಸಿ ಅನುರಾಧ ಅವರು ಮುಂದಿನ ಕ್ರಮಕ್ಕೆ ಸರಕಾರಕ್ಕೆ ಕಳಿಸಿಕೊಡುವುದಾಗಿ ತಿಳಿಸಿದರು.

Ad Widget

Related posts

ಶ್ರೀ ಕಾಮಾಕ್ಷಿ ಸಮುದಾಯ ಭವನ ಶಿಲಾನ್ಯಾಸ

Malenadu Mirror Desk

ಮಲೆನಾಡಿನಲ್ಲಿ ಬಿರುಸಿನ ಮತ ಸಂಭ್ರಮ

Malenadu Mirror Desk

ನಮ್ಮ ರಾಮ ಹೊಲಗದ್ದೆಗಳಲ್ಲಿದ್ದಾನೆ: ಯುದ್ಧವೀರ್ ಸಿಂಗ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.