ಕೃಷಿ ಹೊಂಡಕ್ಕೆ ಬಿದ್ದು ಬಾಳಿ ಬದುಕಬೇಕಿದ್ದ ಇಬ್ಬರು ಮಕ್ಕಳು ಅಸುನೀಗಿದ ಹೃದಯ ಕಲಕುವ ಘಟನೆ ಹೊಸನಗರ ಹೊರವಲಯದ ಮಂಡಾನಿ ಕೋಟೆಕಾನು ಬಳಿ ನಡೆದಿದೆ.
ಕೋಟೆಕಾನಿನ ಗಿರೀಶ ಮತ್ತು ಗಿರಿಜಾ ದಂಪತಿಯ ಮಕ್ಕಳಾದ ನವೀನ(12) ಹಾಗೂ ಸೃಜನ್(9) ಮೃತ ನಿರ್ಭಾಗ್ಯ ಬಾಲಕರು. ಮನೆಯಲ್ಲಿ ಬುಧವಾರ ಮಧ್ಯಾಹ್ನ ಹೆತ್ತವರೊಂದಿಗೆ ಊಟ ಮಾಡಿದ ಮಕ್ಕಳು ತಮ್ಮ ಮನೆಯ ಜಾನುವಾರು ಹುಡುಕಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ.
ಗದ್ದೆಬಯಲಲ್ಲಿ ಯಾರೂ ಇಲ್ಲದ ಕಾರಣ ಗೊತ್ತಾಗಲಿಲ್ಲ. ಮೊದಲು ಬಿದ್ದವನನ್ನು ರಕ್ಷಣೆ ಮಾಡಲು ಹೋಗಿ ಮತ್ತೊಬ್ಬನೂ ಬಿದ್ದಿರುವ ಶಂಕೆಯಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
previous post