ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ 755 ಕೊರೊನ ಸೋಂಕು ಪತ್ತೆಯಾಗಿದ್ದು, ಕೋವಿಡ್ ಎರಡನೇ ಅಲೆ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ. ಒಟ್ಟು ಮೂರು ರೋಗಿಗಳು ಸಾವಿಗೀಡಾಗಿದ್ದು, ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 374ಕ್ಕೆ ಏರಿದೆ. ಶಿವಮೊಗ್ಗ ತಾಲೂಕಿನಲ್ಲಿ ಗುರುವಾರ ಒಂದೇ ದಿನ 221 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 103, ಶಿಕಾರಿಪುರ 67,ತೀರ್ಥಹಳ್ಳಿಯಲ್ಲಿ 108 ,ಸೊರಬ 87,ಸಾಗರ 117,ಹೊಸನಗರ 33 ಹಾಗೂ ಇತರೆ ಜಿಲ್ಲೆಗಳ 19 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 36 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 2439 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.