ಎಲ್ಲವೂ ಸರಿ ಇದ್ದಿದ್ದರೆ ಆ ಹುಡುಗ ಹಸೆಮಣೆಯಲ್ಲಿ ಕೂರಬೇಕಿತ್ತು. ಆದರೇ ಕ್ರೂರ ವಿಧಿ ಅವನಿಗೆ ಅದಕ್ಕೆ ಅವಕಾಶ ಕೊಡದೆ ಚಿತೆಗೇರಿಸಿ ಕರೆದು ಕೊಂಡು ಹೋಗೇಬಿಟ್ಟ. ಇದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಕುಂಚೂರು ಸಮೀಪದ ದೇವರಕೊಡಿಗೆಯ ಪೃಥ್ವಿರಾಜ್(೩೨) ಅವರ ಕರುಣಾಜನಕ ಕತೆ.
ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ನೌಕರಿ ಮಾಡುತಿದ್ದ ಪೃಥ್ವಿಗೆ ತಂದೆ ಮಂಜುನಾಥ್ ಅವರು ವಧು ಗೊತ್ತುಮಾಡಿದ್ದರು. ಕೋವಿಡ್ ನಿಯಮದಂತೆ ಮದುವೆ ಮಾಡಲು ಗುರುವಾರ ಮುಹೂರ್ತವೂ ನಿಗದಿಯಾಗಿತ್ತು.
ಮದುವೆ ತಯಾರಿಗೆ ಬಂದಿದ್ದ
ಮದುವೆ ವಾರ ಇರುವಾಗಲೇ ಊರಿಗೆ ಬಂದಿದ್ದ ಪೃಥ್ವಿ ನವಜೀವನದ ಕನಸು ಕಾಣಿವಾಗಲೇ ಹೊಟ್ಟೆನೋವು ಕಾಣಿಸಿಕೊಂಡಿತ್ತು. ತಕ್ಷಣ ಕೊಪ್ಪಕ್ಕೆ ಬಂದಿದ್ದ ಆತ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ಆದರೆ ಅಲ್ಲಿ ನೆಗೆಟಿವ್ ವರದಿ ಬಂದಿತ್ತು. ಹೊಟ್ಟೆನೋವು ನಿಲ್ಲದ ಕಾರಣ ಪೋಷಕರು ಶಿವಮೊಗ್ಗಕ್ಕೆ ಕರೆತಂದಿದ್ದರು. ಇಲ್ಲಿ ಪರೀಕ್ಷೆ ಮಾಡಿದಾಗ ಕೊರೊನ ಇರುವುದು ದೃಢಪಟ್ಟಿತ್ತು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ಉಸಿರಾಟದ ತೊಂದರೆಯಾಗಿ ಬುಧವಾರ ಕೊನೆಯುಸಿರೆಳೆದ.
ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ಬಂದು ಶವ ಸಂಸ್ಕಾರ ಮಾಡಲಾಗಿದೆ. ವಯಸ್ಸಿನ ಮಿತಿಯಿಲ್ಲದೆ ಕಾಡುವ ಮಹಾಮಾರಿಗೆ ಮದುವೆಯಾಗಬೇಕಿದ್ದ ಹುಡುಗ ಇನ್ನಿಲ್ಲವಾಗಿದ್ದು, ಕೊರೊನ ಕಾಯಿಲೆಯ ಕರಾಳತೆ ತೋರಿಸುತ್ತಿದೆ.