Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ

ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಮುಖಭಂಗ, ಏಳರಲ್ಲಿ ಕಾಂಗ್ರೆಸ್, ಎರಡು ಜೆಡಿಎಸ್ ಹಾಗೂ ಒಂದರಲ್ಲಿ ಬಿಜೆಪಿ

ಶಿವಮೊಗ್ಗ, ಏ.೩೦: ಕೋವಿಡ್ ಅಬ್ಬರದ ನಡುವೆಯೇ ರಾಜ್ಯದ ೮ ಜಿಲ್ಲೆಗಳ ೧೦ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು, ಕಾಂಗ್ರೆಸ್ ಏಳು ನಗರಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಜೆಡಿಎಸ್ ಎರಡರಲ್ಲಿ ಜಯ ಸಾಧಿಸಿದ್ದರೆ, ಬಿಜೆಪಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿ ಕಳಪೆ ಸಾಧನೆ ಮಾಡಿದೆ.


ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿಯೇ ಬಿಜೆಪಿಗೆ ಆಘಾತವಾಗಿದ್ದು, ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿದೆ. ತೀರ್ಥಹಳ್ಳಿಯಲ್ಲಿ ಬಿಜೆಪಿ ಶಾಸಕರೇ ಇದ್ದರೂ ೨೫ ವರ್ಷಗಳ ಬಳಿಕ ಅಲ್ಲಿನ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಬಂದಿದೆ.
ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್,ಭದ್ರಾವತಿ, ರಾಮನಗರ ನಗರಸಭೆ, ಬೇಲೂರು ಪುರಸಭೆ, ಗುಡಿಬಂಡೆ ಮತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಉಳಿದಂತೆ ಚನ್ನಪಟ್ಟಣ ನಗರಸಭೆ ಮತ್ತು ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆದರೆ, ಮಡಿಕೇರಿ ನಗರಸಭೆಯಲ್ಲಿ ಮಾತ್ರ ಬಿಜೆಪಿಯ ಅಧಿಪತ್ಯ ಮುಂದುವರಿದಿದೆ.
ಕೋವಿಡ್ ಎರಡನೇ ಅಲೆಯ ನಡುವೆಯೂ ಏಪ್ರಿಲ್ ೨೭ ರಂದು ೮ ಜಿಲ್ಲೆಗಳಲ್ಲಿ ನಡೆದಿದ್ದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.



ಬಳ್ಳಾರಿ ಮಹಾನಗರ ಪಾಲಿಕೆ

ಒಟ್ಟು ಸ್ಥಾನಗಳು ೩೯: ಕಾಂಗ್ರೆಸ್-೨೧, ಬಿಜೆಪಿ-೧೩, ಜೆಡಿಎಸ್-೦೦, ಪಕ್ಷೇತರ-೦೫

ಬೀದರ್: ಒಟ್ಟು ಸ್ಥಾನಗಳು ೩೫: ಕಾಂಗ್ರೆಸ್-೧೫, ಬಿಜೆಪಿ-೦೮, ಜೆಡಿಎಸ್-೦೭ ಪಕ್ಷೇತರ-೦೫

ರಾಮನಗರ :ಒಟ್ಟು ಸ್ಥಾನಗಳು ೩೧: ಕಾಂಗ್ರೆಸ್-೧೯, ಬಿಜೆಪಿ-೦೦, ಜೆಡಿಎಸ್-೧೧, ಪಕ್ಷೇತರ-೦೧

ಭದ್ರಾವತಿ: ಒಟ್ಟು ಸ್ಥಾನಗಳು ೩೫: ಕಾಂಗ್ರೆಸ್-೧೮, ಬಿಜೆಪಿ-೦೪, ಜೆಡಿಎಸ್-೧೧, ಪಕ್ಷೇತರ-೦೧

ಚನ್ನಪಟ್ಟಣ: ಒಟ್ಟು ಸ್ಥಾನಗಳು ೩೧: ಕಾಂಗ್ರೆಸ್-೦೭, ಬಿಜೆಪಿ-೦೭, ಜೆಡಿಎಸ್-೧೬, ಪಕ್ಷೇತರ-೦೧

ಮಡಿಕೇರಿ: ಒಟ್ಟು ಸ್ಥಾನಗಳು ೨೩: ಕಾಂಗ್ರೆಸ್-೦೧, ಬಿಜೆಪಿ-೧೬, ಜೆಡಿಎಸ್-೦೧, ಎಸ್‌ಡಿಪಿಐ-೦೫ ಪಕ್ಷೇತರ-೦೦

ಬೇಲೂರು:ಒಟ್ಟು ಸ್ಥಾನಗಳು ೨೩: ಕಾಂಗ್ರೆಸ್-೧೭, ಬಿಜೆಪಿ-೦೧, ಜೆಡಿಎಸ್-೦೫, ಪಕ್ಷೇತರ-೦೦

ವಿಜಯಪುರ : ಒಟ್ಟು ಸ್ಥಾನಗಳು ೨೩: ಕಾಂಗ್ರೆಸ್-೦೬, ಬಿಜೆಪಿ-೦೧, ಜೆಡಿಎಸ್-೧೪, ಪಕ್ಷೇತರ-೦೨

ಗುಡಿಬಂಡೆ: ಒಟ್ಟು ಸ್ಥಾನಗಳು ೧೧: ಕಾಂಗ್ರೆಸ್-೦೬, ಬಿಜೆಪಿ-೦೦, ಜೆಡಿಎಸ್-೦೨, ಪಕ್ಷೇತರ-೦೩

ತೀರ್ಥಹಳ್ಳಿ: ಒಟ್ಟು ಸ್ಥಾನಗಳು ೧೫: ಕಾಂಗ್ರೆಸ್-೦೯, ಬಿಜೆಪಿ-೦೬, ಜೆಡಿಎಸ್-೦೦, ಪಕ್ಷೇತರ-೦೦

ಒಟ್ಟು ೨೬೬ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು ೧೧೯ ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು ೪೪.೭೩% ಮತಗಳನ್ನು ಪಡೆದಿದೆ. ಜೆಡಿಎಸ್ ೬೭ ಸ್ಥಾನಗಳಲ್ಲಿ ಜಯಿಸಿದ್ದು, ೨೫.೧೮% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ ೫೬ ಸ್ಥಾನಗಳಲ್ಲಿ ಜಯಗಳಿಸಿದ್ದು, ೨೧.೦೫% ರಷ್ಟು ಮತಗಳನ್ನು ಪಡೆದಿದೆ.

Ad Widget

Related posts

ಬಿಪಿಎಲ್ ಕಾರ್ಡ್ಗೆ ಕಲ್ಲೂರು ಮೇಘರಾಜ್ ಆಗ್ರಹ

Malenadu Mirror Desk

ಜಾತಿ ಸಮೀಕ್ಷೆ ಅನುಷ್ಠಾನಕ್ಕೆ ಮನವಿ

Malenadu Mirror Desk

ಪ್ರತಿಭಟನೆ ವೇಳೆ ಉಪನ್ಯಾಸಕಿ ಅಸ್ವಸ್ಥ : ಎಂಎಲ್ಸಿ ಡಾ.ಧನಂಜಯ ಸರ್ಜಿರಿಂದ ಚಿಕಿತ್ಸೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.