ಮನುಕುಲಕ್ಕೆ ಮಾರಕವಾಗಿರುವ ಕೊರೊನಾ ನಿಯಂತ್ರಣ ಸವಾಲಾಗಿದ್ದು,ಸಮರ್ಥವಾಗಿ ಎದುರಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ ಹೆಚ್ಚಿನ ನಿಗಾವಹಿಸಬೇ ಕಾಗಿದೆ ಸಣ್ಣಪುಟ್ಟ ಕಾಯಿಲೆಗಳಿಗೆ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಶಿಫಾರಸು ಮಾಡುವ ಮೂಲಕ ಹೆಚ್ಚಿನ ಒತ್ತಡ ಹೇರದೆ ಇಲ್ಲಿನ ಆಸ್ಪತ್ರೆಯಲ್ಲಿಯೇ ಪರಿಹರಿ ಸುವಂತೆ ಸಂಸದ ಬಿ.ವೈ ರಾಘವೇಂದ್ರ ಸೂಚಿಸಿದರು.
ಶಿಕಾರಿಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಕೊರೊನ ನಿಯಂತ್ರಿಸುವ ಹಿನ್ನಲೆಯಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಗ ಳಲ್ಲಿಯೂ ಕೊರೊನ ಸೋಂಕಿತರಿಗೆ ಗುಣ ಮಟ್ಟದ ಚಿಕಿತ್ಸೆ ದೊರೆಯಬೇಕು ಎನ್ನುವ ಉದ್ದೇಶಕ್ಕೆ ಪಟ್ಟಣದ ಸರಕಾರಿ ಆಸ್ಪತ್ರೆಗೆ ಹೆಚ್ಚು ಹೆಚ್ಚು ಸೌಲಭ್ಯ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ,ಎಲ್ಲ ವೈದ್ಯರು, ಅಧಿಕಾರಿಗಳ ಹೊಣೆ ಹೆಚ್ಚಾಗಿದೆ,ಕ್ವಾರೆಂಟೈನ್ ವ್ಯಕ್ತಿಗಳ ನಿಗಾಕ್ಕೆ ಆಪ್ ರಚಿಸಲಾಗಿದ್ದು ಅದರ ಪ್ರಕಾರ ಶೇ.೭೬ ಪ್ರಗತಿ ತಾಲೂಕಿ ನಲ್ಲಿದ್ದು ಅದು ನೂರಕ್ಕೆ ತಲುಪಬೇಕು, ಪಟ್ಟಣದ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಊಟ ಸರಿಯಿಲ್ಲ ಎನ್ನುವ ದೂರು ಇದ್ದು ಈ ಬಗ್ಗೆ ತಹಸೀಲ್ದಾರ್ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು, ಶಿವಮೊಗ್ಗ ಮೆಗ್ಗಾನ್ ವೈದ್ಯ ರಿಗೆ ಹೆಚ್ಚಿನ ಒತ್ತಡ ಬಾರದಂತೆ ಎಚ್ಚರಿಕೆ ವಹಿ ಸಬೇಕಿರುವ ಕಾರಣಕ್ಕೆ ಈ ಕ್ರಮ ಅನಿ ವಾರ್ಯ ಎಂದು ಹೇಳಿದರು.
ಒಗ್ಗಟ್ಟಾಗಿ ಎದುರಿಸೋಣ
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಕೊರೋನಾ ನಿಯಂತ್ರಣ ಮುಂದಿನ ೪೫ದಿನ ಜನಪ್ರತಿ ನಿಧಿಗಳು,ಅಧಿಕಾರಿಗಳು,ಆರೋಗ್ಯ ಇಲಾ ಖೆಗೆ ಸವಾಲಾಗಿದ್ದು,ಎಲ್ಲರೂ ಒಗ್ಗಟ್ಟಾಗಿ ಅದನ್ನು ಎದುರಿಸೋಣ ಅದಕ್ಕೆ ಅಗತ್ಯವಿ ರುವ ಎಲ್ಲ ಸಹಕಾರವನ್ನು ಸರ್ಕಾರ ನೀಡು ತ್ತದೆ ಎಂದು ತಿಳಿಸಿದರು.
ಈಗಾಗಲೆ ರೋಗ ಪತ್ತೆಯಾಗಿರುವ ವ್ಯಕ್ತಿಗಳಿಂದ ಬೇರೆಯವರಿಗೆ ಹರಡದಂತೆ ಮೊದಲು ಮುನ್ನೆಚ್ಚರಿಕೆ ವಹಿಸಬೇಕು, ಕ್ವಾರಂಟೈನ್ ಮಾಡಿರುವ ವ್ಯಕ್ತಿಗಳ ಮನೆಗೆ ಪ್ರತಿದಿನ ಭೇಟಿನೀಡಿ ಚಿಕಿತ್ಸೆ ನೀಡುವ ಜತೆ ಅವರ ಯೋಗಕ್ಷೇಮ ವಿಚಾರಿಸಬೇಕು, ಧೈರ್ಯ ತುಂಬಬೇಕು, ಮನೆಯಿಂದ ಹೊರಗೆ ಬಾರದಂತೆ ಸೂಕ್ತ ಎಚ್ಚರಿಕೆ ನೀಡ ಬೇಕು. ಸರ್ಕಾರ ಎಲ್ಲ ಬಗೆಯ ಸೌಲಭ್ಯ ನೀಡುವುದಕ್ಕೆ ಸಿದ್ಧವಿದೆ ಯಾವುದೆ ಕೊರತೆ ಇದ್ದರೂ ಡಿಸಿ ಗಮನಕ್ಕೆ ತಂದು ಸಮಸ್ಯೆ ಸ್ಥಳ ದಲ್ಲೆ ಪರಿಹರಿಸುವುದಕ್ಕೆ ಮುಂದಾಗಬೇಕು ಎಂದರು.
ಜಿಲ್ಲಾಧಿಕಾರಿ ಶಿವಕುಮಾರ್ ಮಾತನಾಡಿ, ಸೊರಬ, ಶಿಕಾರಿಪುರ ತಾಲೂಕಿನ ರೋಗಿಗಳು ಶಿವಮೊಗ್ಗಕ್ಕೆ ಬಾರದಂತೆ ಇಲ್ಲಿಯೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯ ಸೌಲಭ್ಯ ನೀಡಲಾಗುವುದು, ಐಸಿಯುನಲ್ಲಿ ಸಿಸಿ ಟಿವಿ ಅಳವಡಿಸಬೇಕು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕೊರೊನಾ ರೋಗಿಗಳು ಶಿವಮೊಗ್ಗಕ್ಕೆ ತೆರಳುವುದಕ್ಕೆ ಅಂಬುಲೈನ್ಸ್ ಸಿದ್ಧವಾಗಿರಿಸಿಕೊಳ್ಳಬೇಕು, ಎರಡನೆ ಅಲೆ ಹರಡುವಿಕೆ ವೇಗ ಹೆಚ್ಚಿದ್ದು ಮದುವೆ, ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆರೋಗ್ಯ ಸೇವೆ ನೀಡುವ ಶೇ.೫೦ರಷ್ಟು ವಾರಿಯರ್‍ಸ್‌ಗೆ ಎರಡನೇ ಡೋಸ್ ನೀಡಿಲ್ಲ ಅವರಿಗೆ ಚುಚ್ಚುಮದ್ದು ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದರು.