Malenadu Mitra
ರಾಜ್ಯ ಶಿವಮೊಗ್ಗ

ಬಸವಣ್ಣನವರ ಜೀವನಾದರ್ಶಗಳು ಸಾರ್ವಕಾಲಿಕ

ಜಗತ್ತಿಗೆ ಮಾನವತೆಯ ಸಂದೇಶ ಸಾರಿದ ಜಗಜ್ಯೋತಿ ಬಸವಣ್ಣನವರ ಜೀವನಾದರ್ಶಗಳು ಮೌಲ್ಯಯುತವು ಹಾಗೂ ಸಾರ್ವಕಾಲಿಕವಾದವುಗಳಾಗಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬಸವಣ್ಣನವರ 888ನೇ ಬಸವೇಶ್ವರ ಜಯಂತಿ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಅವರ ಕಾಯಕದ ಪರಿಕಲ್ಪನೆ ವಿಶ್ವವಿಖ್ಯಾತವಾಗಿದ್ದು ಸಾರ್ವಕಾಲಿಕವಾಗಿರಲಿದೆ. ಬಸವಣ್ಣ ಕೇವಲ ವಿಚಾರವಾದಿ ಸಮಾಜ ಸುಧಾರಕ ಮಾತ್ರವಲ್ಲ ವೈಚಾರಿಕತೆಯು ಭಕ್ತಿಯ ನೆಲೆಗಟ್ಟಿನ ಮೇಲೆ ಧಾರ್ಮಿಕ ಪರಿಧಿಯೊಳಗೆ ಭೌತಿಕ ಮತ್ತು ಆಧ್ಯಾತ್ಮಿಕವನ್ನು ಮೇಳೈಸಿಕೊಂಡಿದೆ ಎಂದ ಅವರು ಅವರ ಆದರ್ಶಗಳು ಕೇವಲ ಕೃತಿಗೆ ಮಾತ್ರ ಸೀಮಿತವಾಗದೆ ಕಾರ್ಯರೂಪಕ್ಕೆ ಬರುವ ಅಗತ್ಯವಿದೆ ಎಂದರು.

ಪ್ರಸಕ್ತ ಆಡಳಿತಾರೂಢ ಘನ ಸರ್ಕಾರವು ಹೈದರಾಬಾದ್ ಕರ್ನಾಟಕದ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಿ, ಆ ಭಾಗದ ಬಸವಕಲ್ಯಾಣದ ಅಭಿವೃದ್ಧಿಗೆ ಅಗತ್ಯ ನೆರವು ನೀಡಿದೆ ಎಂದರು.

ಬಸವಣ್ಣನವರ ಜೀವನ ಸಂದೇಶ ಜಗತ್ತಿಗೆ ಪಸರಿಸುವ ನಿಟ್ಟಿನಲ್ಲಿ ಈ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಅಮೇರಿಕೆಯ ಥೇಮ್ಸ್ ನದಿ ದಂಡೆಯಲ್ಲಿ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದು ಹರ್ಷದ ಸಂಗತಿ ಎಂದರು.

ಈ ಸರಳ ಸಮಾರಂಭವನ್ನು ಉದ್ಘಾಟಿಸಿದ ಬಸವ ಕೇಂದ್ರದ ಡಾ॥ ಬಸವ ಮರುಳಸಿದ್ಧ ಸ್ವಾಮೀಜಿ ಅವರು ಮಾತನಾಡಿ, ಮ್ಯಾಗ್ನಕಾರ್ಟ ರಚನೆಯ 60ವರ್ಷಗಳ ಮೊದಲೆ ಅನುಭವ ಮಂಟಪದ ಪರಿಕಲ್ಪನೆಯನ್ನು ಅನುಷ್ಟಾನಕ್ಕೆ ತಂದ ಮಹಾನ್ ಚಿಂತಕ ಬಸವಣ್ಣನವರು ಎಂದವರು ಬಣ್ಣಿಸಿದರು.

ಪ್ರಜಾಪ್ರಭುತ್ವದ ಮೂಲ ಪರಿಕಲ್ಪನೆಯನ್ನು ಮಹನೀಯ ಬಸವಣ್ಣ ಎಂದ ಅವರು ಅವರ ತತ್ವಾದರ್ಶಗಳನ್ನು ಅನುಷ್ಥಾನಕ್ಕೆ ತರುವುದೇ ನಾವು ಅವರಿಗೆ ನೀಡುವ ಗೌರವ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ , ಸಿಇಒ ಶ್ರೀಮತಿ ಎಂ.ಎಲ್.ವೈಶಾಲಿ, ಎಸ್ಪಿ ಲಕ್ಷ್ಮೀಪ್ರಸಾದ್, ದತ್ತಾತ್ರಿ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ. ಅನುರಾಧ, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಹೆಚ್.ಸಿ.ಯೋಗೀಶ್, ಎನ್.ಜೆ.ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.

Ad Widget

Related posts

ಹಕ್ಕುಪತ್ರ, ಸ್ಮಾರ್ಟ್ ವಿಲೇಜ್ :ಗ್ರಾಮಾಂತರ ಬಿಜೆಪಿ ಪ್ರಣಾಳಿಕೆ

Malenadu Mirror Desk

ಜೀವನದ ಎಲ್ಲಾ ಸಮಸ್ಯೆಗಳಿಗೆ ಸಾಹಿತ್ಯ ಸಂಜೀವಿನಿ

Malenadu Mirror Desk

ಅನುಕಂಪದ ಅಲೆಯಲ್ಲಿ ಕಿಮ್ಮನೆ, ಅಧಿಕಾರದ ಪ್ರಭಾವಳಿಯಲ್ಲಿ ಆರಗ, ಬುದ್ದಿವಂತರ ಮತಕ್ಷೇತ್ರದಲ್ಲಿ ಕುತೂಹಲ ಘಟ್ಟದಲ್ಲಿ ರಣಕಣ

Malenadu Mirror Desk

6 comments

kodandsagar May 16, 2021 at 5:54 am

ಬಸವಣ್ಣ ನವರ ಆದರ್ಶಗಳು ಸಾರ್ವಕಾಲಿಕ ನಿಜ. ಆದರೆ ಎಷ್ಟು ಜನ ಎಷ್ಟು ಸಮುದಾಯಗಳು ಅನುಸರಿಸುತ್ತಿದ್ದಾರೆ. ಸ್ವಾಮೀಜಿಗಲೆ ಇವ ನಮ್ಮವ..ಅವ ನಮ್ಮವ, ನಮ್ಮವರಿಗೆ ಮೀಸಲಾತಿ ಬೇಕು, ನಮ್ಮವರಿಗೆ ಮಂತ್ರಿ ಮಾಡಿ.. ಹೀಗೇ ಬಿನ್ನ ಬೇದಗಳು ಮಠ ದ ಸ್ವಾಮೀಜಿಗಳು ಇಂತಹ ದಾರಿ ಹಿಡಿದು ಹೊರಟರೆ…ಬಸವಣ್ಣನವರ ಆದರ್ಶ ಕೇವಲ ಪುಸ್ತಕದ ಬದನೆ ಕಾಯಿ ಆಗುತ್ತೆ…. ರಾಜಕಾರಣಿ ಗಳು ಭಾಷಣದ ವಸ್ತು ಆಗುತ್ತೆ ಅಷ್ಟೆ.

Reply
Malenadu Mirror Desk November 21, 2021 at 2:04 am

ನಿಜ

Reply
kodandsagar May 16, 2021 at 6:05 am

ಬಸವಣ್ಣ ನವರ ಆದರ್ಶಗಳು ಸಾರ್ವಕಾಲಿಕ ನಿಜ. ಆದರೆ ಎಷ್ಟು ಜನ ಎಷ್ಟು ಸಮುದಾಯಗಳು ಅನುಸರಿಸುತ್ತಿದ್ದಾರೆ. ಸ್ವಾಮೀಜಿಗಲೆ ಇವ ನಮ್ಮವ..ಅವ ನಮ್ಮವ, ನಮ್ಮವರಿಗೆ ಮೀಸಲಾತಿ ಬೇಕು, ನಮ್ಮವರಿಗೆ ಮಂತ್ರಿ ಮಾಡಿ.. ಹೀಗೇ ಮಠ ದ ಸ್ವಾಮೀಜಿಗ ಲೆ. ಹಠ ಹಿಡಿದು ಹೊರಟರೆ…ಬಸವಣ್ಣನವರ ಆದರ್ಶ ಕೇವಲ ಪುಸ್ತಕದ ಬದನೆ ಕಾಯಿ ಆಗುತ್ತೆ…. ರಾಜಕಾರಣಿ ಗಳ ಭಾಷಣದ ವಸ್ತು ಆಗುತ್ತೆ ಅಷ್ಟೆ.

ಬಸವಣ್ಣನವರ ಆದರ್ಶಗಳನ್ನು ಯಾರು ಮೈಗೂಡಿಸಿಕೊಂಡಿದ್ದಾರೆ ….ಆಚರಣೆಯಲ್ಲಿ ತರುತ್ತಾರೆ ಅಂಥವರು ಬಸವಣ್ಣನವರ ಗುಣಗಾನ ಮಾಡಿದರೆ ಹೆಚ್ಚು ಅರ್ಥ ಪೂರ್ಣ ವಾಗಿರುತ್ತದೆ.

Reply
Malenadu Mirror Desk May 16, 2021 at 8:33 am

yes u r right sir

Reply
Malenadu Mirror Desk May 16, 2021 at 12:09 pm

thanks to comment sir

Reply
Malenadu Mirror Desk May 16, 2021 at 12:10 pm

tks to commrnt sir

Reply

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.