ರಿಪ್ಪನ್ ಪೇಟೆ: ಹುಂಚಾ ಗ್ರಾಮದ ಹೊಂಡ್ಲಗದ್ದೆ ಸಮೀಪದ ಆದಿಗೆದ್ದೆ ನಿವಾಸಿ ಉಮೇಶ್(47) ಕೃಷಿ ಕಲಸ ಮುಗಿಸಿಕೊಂಡು ಮಳೆಬರುತ್ತೆದೆಂಬ ಕಾರಣದಿಂದ ಮನೆಗೆ ವಾಪಾಸ್ ಅಗುವಾಗಿ ಸಿಡಿಲು ಬಡಿದು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಉಮೇಶ್ ತೋಟದಲ್ಲಿ ಕಾಳುಮೆಣಸು ಕಟಾವು ಮಾಡಿಕೊಂಡು ಬರಲು ತನ್ನ ಮಡದಿಯೊಂದಿಗೆ ಹೋದ ಸಂದರ್ಭದಲ್ಲಿ ಗಾಳಿ ಮಳೆ ಗುಡುಗು ಸಿಡಿಲಿನ ಆರ್ಭಟ ಹೆಚ್ಚಾಗಿದ್ದು
ಏಣಿಯೊಂದಿಗೆ ಮನೆಗೆ ಮರಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಪತಿ ಉಮೇಶ್ ಸ್ಥಳದಲ್ಲಿ ಸಾವನ್ನಿಪ್ಪಿದರು ಎಂದು ಹೇಳಲಾಗಿದೆ ಪತ್ನಿ ಅಪಾಯದಿಂದ ಪಾರಾಗಿದ್ದಾರೆ
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಯ ಪ್ರಭಾರಿ ಪಿಎಸ್‍ಐ ಯಲ್ಲಪ್ಪ ಮತ್ತು ಸಿಬ್ಬಂದಿವರ್ಗ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
previous post
next post