ರಿಪ್ಪನ್‌ಪೇಟೆ;-ಕಳೆದ ಗುರುವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ ರೈತ ಹೊಂಡ್ಲಗದ್ದೆ ಉಮೇಶ್ ಕುಟುಂಬಕ್ಕೆ ಸರ್ಕಾರದ ತುರ್ತು ಪರಿಹಾರ ನಿಧಿಯಿಂದ
5 ಲಕ್ಷ ರೂನ ಪರಿಹಾರ ಚಕ್‌ಯನ್ನು ಅವಘಡ ಸಂಭವಿಸಿ 36 ಗಂಟೆಯೊಳಗೆ ರೈತ ಕುಟುಂಬಕ್ಕೆ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ವಿತರಣೆ ಮಾಡಿದರು.
ಹುಂಚಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಡ್ಲಗದ್ದೆ ಗ್ರಾಮದ ಆದಿಗದ್ದೆ ನಿವಾಸಿ ಹೆಚ್.ಎಲ್.ಉಮೇಶ್ ಎಂಬುವರು ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ಸರ್ಕಾರದ ಪರಿಹಾರ ಯೋಜನೆಯಡಿ 5 ಲಕ್ಷ ರೂ ಪರಿಹಾರ ಹಣವನ್ನು ನೀಡಲಾಗಿದೆ ಎಂದು ಆರಗ ಜ್ಞಾನೇಂದ್ರ ವಿವರಿಸಿ ಈ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ ಮೃತರ ಮನೆಗೆ ಭೇಟಿ ಸಾಂತ್ವನ ಹೇಳಿ ಆಕಸ್ಮಿಕ ಸಾವನ್ನಪ್ಪಿರುವ ಕುಟುಂಬದ ದುಡಿಯುವ ಶಕ್ತಿಯೇ ಇಲ್ಲದ ಸ್ಥಿತಿಯಲ್ಲಿ ಕುಟುಂಬಕ್ಕೆ ದೇವರು ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸಿ ಯಾವುದೇ ಕಾರಣಕ್ಕೂ ದೃತಿಗೆಡದೆ ತಾವು ತಮ್ಮ ಕೃಷಿ ಕಾಯಕವನ್ನು ಮಾಡಿ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ವಿ.ಎಸ್.ರಾಜೀವ್ ಗ್ರಾಮ ಪಂಚಾಯ್ತಿ ಅಡಳಿತ ವರ್ಗ ಇನ್ನಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.