ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ. ಬಿ. ಅಶೋಕ ನಾಯ್ಕರವರು ಹೊಳೆಹೋನ್ನೂರು ಹಾಗೂ ಕಲ್ಲಿಹಾಳ್ ಬಿ.ಸಿ.ಎಮ್ ಹಾಸ್ಟೆಲ್ ಗೆ ಹಾಗೂ ಹಂಚಿನ ಸಿದ್ದಾಪುರದ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಕೋವಿಡ್ 19 ಕೇರ್ ಸೆಂಟರ್ ಆರಂಭಿಸುವ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕೋವಿಡ್ ಕೇರ್ ಸೆಂಟರ್ ನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು ಶುಚಿತ್ವ ಕಾಪಾಡಿಕೊಳ್ಳಬೇಕು, ಬೆಡ್ ಗಳ ಸಂಖ್ಯೆ ಹಾಗೂ ಔಷಧಿಗಳ ಪೂರೈಕೆಯ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಸಂತೋಷ್ , ಇ.ಒ. ರಮೇಶ್ , ಟಿ.ಹೆಚ್.ಒ.ಅಶೋಕ್ ಎಸ್.ಐ ಸುರೇಶ್ , ಸಿ.ಒ ಸ್ಟಾನಿ ಫರ್ನಾಂಡಿಸ್, ಪಿಡಿಒ ಅರ್ಚನಾ, ಮಂಡಲ ಅಧ್ಯಕ್ಷರಾದ ಮಂಜುನಾಥ್ ರವರು ಹಾಗೂ ಕುಮಾರ್ ನಾಯ್ಡು, ನಂಜುಂಡಸ್ವಾಮಿ, ಸಿದ್ದಪ್ಪ ಮತ್ತು ಪಕ್ಷದ ಪ್ರಮುಖರು ಇತರರು ಉಪಸ್ಥಿತರಿದ್ದರು