Malenadu Mitra
ರಾಜ್ಯ ಶಿವಮೊಗ್ಗ

ಕೊರೊನ ಆಘಾತ,ವಿದ್ಯುತ್ ಉತ್ಪಾದನೆಗೂ ಕಂಟಕ ಸಿಬ್ಬಂದಿಗೆ ರಜೆ ಇಲ್ಲ, ಲಸಿಕೆ ಮೊದಲೇ ಇಲ್ಲ

ಚಾಮರಾಜನಗರದಲ್ಲಿ ಆಕ್ಷಿಜನ್ ಇಲ್ಲದೆ ಕೊರೊನ ಶೋಂಕಿತರು ಸಾವೀಗೀಡಾದ ಸುದ್ದಿ ಹಸಿರಾಗಿರುವಾಗಲೇ ವಿದ್ಯುತ್ ಕೊರತೆಯಿಂದ ಮುಂದೊಂದು ದಿನ ಭಾರೀ ಅನಾಹುತ ಆಗಲಿದೆಯೇ ಎಂಬ ಅನುಮಾನ ಕಾಡುತ್ತಿದೆ.
ನಾಡಿಗೆ ಬೆಳಕು ಕೊಡುವ ಕರ್ನಾಟಕ ವಿದ್ಯುತ್ ನಿಗಮದ ನೌಕರರ ಮೇಲೆ ಕೊರೊನ ಮಹಾಮಾರಿಯ ಸವಾರಿ ಮತ್ತು ಅಲ್ಲಾಗಿರುವ ಸಾವು ನೋವುಗಳನ್ನು ಗಮನಿಸಿದರೆ ಇಂತಹ ಸಂಶಯ ವ್ಯಕ್ತವಾಗುತ್ತದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಕೊಳ್ಳದ ವಿವಿಧ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಈಗಾಗಲೇ ೯ ಮಂದಿ ನೌಕರರು ಕೊರೊನ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇಷ್ಟಾದರೂ ಸುರಕ್ಷತಾ ಕ್ರಮ ಕೈಗೊಳ್ಳದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಉತ್ಪಾದನೆಗೇ ಪೆಟ್ಟು ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸುರಕ್ಷತೆ ಮತ್ತು ಸರಕಾರದಿಂದ ಭದ್ರತೆಯ ಭರವಸೆ ಇಲ್ಲದೆ ನಾವು ಕೆಲಸ ಮಾಡುವುದಿಲ್ಲ ಎಂದು ವಿದ್ಯುತ್ ನಿಗಮದ ಸಿಬ್ಬಂದಿ ಬುಧವಾರ ಹಿರಿಯ ಅಧಿಕಾರಿಗಳ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸರಕಾರ ಸರಕಾರಿ ಕಚೇರಿಗಳಲ್ಲಿ ರೊಟೇಷನ್ ಆಧಾರದಲ್ಲಿ ಶೇ ೫೦ ಹಾಜರಾತಿಗೆ ವಿನಾಯಿತಿ ನೀಡಿದೆ. ಆದರೆ ಕೆಪಿಸಿಎಲ್‌ನಲ್ಲಿ ಕೋವಿಡ್ ಮಾರ್ಗದರ್ಶಿಗಳನ್ನು ಗಾಳಿಗೆ ತೂರಿ ಬಯೊಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ರಾಜ್ಯಮಟ್ಟದಲ್ಲಿರುವ ಟಾಸ್ಕ್ ಫೋರ್ಸ್ ಸದಸ್ಯರೂ ಆಗಿರುವ ಕೆಪಿಸಿ ಎಂ.ಡಿ ಪೊನ್ನುರಾಜ್ ಅವರೇ ಈ ಆದೇಶಗಳನ್ನು ಮಾಡಿರುವುದು ದುರ್ದೈವದ ಸಂಗತಿಯಾಗಿದೆ.

ನಿಗಮದ ಮುಖ್ಯ ಎಂಜನಿಯರ್‌ಗಳಾದ ನಾರಾಯಣ ಪಿ ಗಜಕೋಶ, ಜಿ.ಸಿ.ಮಹೇಂದ್ರ ಹಾಗೂ ಮಾನವ ಸಂಪನ್ಮೂಲ ನಿರ್ದೇಶಕ ವಿಠ್ಠಲ್ ಎಸ್.ಬಾವಿ ಕಟ್ಟೆ ಅವರ ಬಳಿ ಅಳಲು ತೋಡಿಕೊಂಡಿರುವ ಕಾರ್ಮಿಕರು ಹಾಗೂ ಸಿಬ್ಬಂದಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ಸಾವು-ನೋವು

ಶರಾವತಿ ಕೊಳ್ಳದ ಜಲವಿದ್ಯುತ್ ಯೋಜನೆಗಳಲ್ಲಿ ಸುಮಾರು ೬ ಜಿಲ್ಲೆಗಳಿಗೆ ಪೂರೈಕೆಯಾಗುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಇಲ್ಲಿ ಒಟ್ಟು ೧೪೬೯.೨೦ ಮೆಗಾವ್ಯಾಟ್ ವಿದ್ಯುತ್ ಪ್ರತಿದಿನ ಉತ್ಪಾದನೆಯಾಗುತ್ತಿದೆ. ಕೋವಿಡ್ ಕಾರಣದಿಂದ ಸಿಬ್ಬಂದಿಗಳು ಗೈರಾದರೆ ಮತ್ತು ಅಸುನೀಗಿದರೆ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಶರಾವತಿ ಕಣಿವೆಯ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಈಗಾಗಲೇ ೯ ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ ಇಬ್ಬರು ಪೂರ್ಣಾವಧಿ ಮತ್ತು ೭ ಮಂದಿ ಗುತ್ತಿಗೆ ಆಧಾರದ ನೌಕರರಾಗಿದ್ದಾರೆ. ೪೫ ಮಂದಿ ಪೂರ್ಣಾವಧಿ ಹಾಗೂ ೬೫ ಮಂದಿ ಗುತ್ತಿಗೆ ಆಧರಿತ ನೌಕರರು ಕೊರೊನ ಸೋಂಕಿಗೆ ತುತ್ತಾಗಿದ್ದಾರೆ. ಎಲ್ಲಾ ಇಲಾಖೆಯಲ್ಲಿ ಹಾಜರಾತಿಯಲ್ಲಿ ವಿನಾಯಿತಿ ಇದ್ದರೂ ಇಲ್ಲಿ ಮಾತ್ರ ಬಯೊಮೆಟ್ರಿಕ್ ಕಡ್ಡಾಯ ಮಾಡಿ ಕೊರೊನ ಸೋಂಕಿತರು ಮತ್ತು ಪ್ರೈಮರಿ ಸಂಪರ್ಕಿತರ ನಡುವೆ ಕೆಲಸ ಮಾಡುವಂತಾಗಿದೆ ಎಂದು ನೌಕರರೇ ದೂರಿದ್ದಾರೆ.


ಲಸಿಕೆ ಹಾಕಿಸಿಲ್ಲ

ಮೂಲಭೂತ ಅಗತ್ಯವಾದ ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಕೆಲಸ ಮಾಡುವವರಿಗೇ ಆದ್ಯತೆ ಮೇರೆ ಲಸಿಕೆ ಹಾಕಿಸಬೇಕಿತ್ತು. ಆದರೆ ನಿಗಮದ ಆಡಳಿತ ಮಂಡಳಿ ಈ ದಿಸೆಯಲ್ಲಿ ಚಿಂತನೆ ಮಾಡಿಲ್ಲ. ೪೫ ರ ಮೇಲಿನ ವಯೋಮಾನದ ಕೆಲವರು ತಾವಾಗಿಯೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಇಲ್ಲಿ ೪೫ ರೊಳಗಿನ ವಯಸ್ಸಿನವರೇ ಹೆಚ್ಚಿದ್ದು, ಈವರೆಗೂ ಲಸಿಕೆ ಹಾಕಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗಾಗಲಿ ಕೂಡಲೇ ನಿಗಮದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಕೋವಿಡ್ ನಿಯಂತ್ರಣ ಸಮಿತಿಯ ಸದಸ್ಯರೂ ಆದ ಪೊನ್ನರಾಜ್ ಅವರು ತಮ್ಮದೇ ಇಲಾಖೆಯ ನೌಕರರ ಬಗ್ಗೆ ಗಮನ ಹರಿಸಬೇಕಾಗಿದೆ.

Ad Widget

Related posts

ಉದ್ಯೋಗ, ಕೈಗಾರಿಕೆ ಸ್ಥಾಪನೆ, ಸೌಹಾರ್ದತೆ ನನ್ನ ಆದ್ಯತೆ, ಪತ್ರಿಕಾ ಸಂವಾದದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ

Malenadu Mirror Desk

9ನೇ ದಿನಕ್ಕೆ ಕಾಲಿಟ್ಟ ಭೂ ಹಕ್ಕಿನ ಹೋರಾಟ : ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೀಟಿಂಗ್ ಫಿಕ್ಸ್

Malenadu Mirror Desk

ಹೊರಗಿನ ಶಕ್ತಿಗಳಿಗೆ ಮಾತಿಗೆ ಮರುಳಾಗದೆ ಶಾಂತಿಯಿಂದ ನೆಲಸಿ : ಶಾಂತಿನಗರ ನಿವಾಸಿಗಳಿಗೆ ಎಸ್ ಪಿ ಸಲಹೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.