ಕೊರೊನ ಅಬ್ಬರ ಶಿವಮೊಗ್ಗದಲ್ಲಿ ಮುಂದುವರಿದಿದ್ದು, ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಗುರುವಾರ 17ಮಂದಿ ಅಸುನೀಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ 652ಕ್ಕೇರಿದೆ. ಗುರುವಾರ 881ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸುರಕ್ಷಿತ ಕ್ರಮಗಳ ನಡುವೆಯೂ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಅತಂಕಕ್ಕೆ ಕಾರಣವಾಗಿದೆ. ಇದೇ ವೇಳೆ 922ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 221,ಭದ್ರಾವತಿಯಲ್ಲಿ 202,ತೀರ್ಥಹಳ್ಳಿಯಲ್ಲಿ64ಶಿಕಾರಿಪುರ 49 ಸಾಗರ 142,ಹೊಸನಗರ 75,ಸೊರಬ 91ಹಾಗೂ ಇತರೆ ಜಿಲ್ಲೆಯ 31ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಪೈಕಿ 30ಮಂದಿ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ6841 ಸಕ್ರಿಯ ಕೊರೊನ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.
next post