ಶಿವಮೊಗ್ಗ ನಗರದಲ್ಲಿ ಬುಧವಾರ ಮಧ್ಯರಾತ್ರಿ ವಾಹನಗಳನ್ನು ಜಖಂ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರಂನ ಶಾಹಿಲ್ ಖಾನ್ (21), ಭರ್ಮಪ್ಪನಗರದ ಮನ್ಸೂರ್ ಅಹಮದ್(32) ಬಂಧಿತ ಆರೋಪಿಗಳಾಗಿದ್ದಾರೆ. ಈ ವ್ಯಕ್ತಿಗಳು ರಾತ್ರಿವೇಳೆ ಕಬ್ಬಿಣದ ರಾಡುಗಳಿಂದ ಭರ್ಮಪ್ಪನಗರ ಹಾಗೂ ಸಿದ್ದಯ್ಯ ರಸ್ತೆಗಳಲ್ಲಿ ನಿಲ್ಲಿಸಿದ್ದ 12 ಕಾರು ,1 ಆಟೊ ಹಾಗೂ 5 ಬೈಕ್‍ಗಳನ್ನು ಜಖಂಗೊಳಿಸಿದ್ದರು. ಪ್ರಶ್ನಿಸಿದ್ದ ಜನರಿಗೆ ಚಾಕು ತೋರಿಸಿ ಅಶಾಂತಿ ಉಂಟುಮಾಡಿದ್ದರು. ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ದ ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದಾರೆ. ಘಟನೆ ಹಿಂದೆ ಯಾರಿದ್ದಾರೆ. ಯಾವ ಕಾರಣಕ್ಕೆ ಈ ದುಷ್ಕøತ್ಯ ಎಸಗಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾತ್ರಿ ನಡೆದ ಘಟನೆ ಖಂಡಿಸಿ ಬಿಜೆಪಿ ಮುಖಂಡರು ಎಸ್ಪಿಗೆ ದೂರು ಸಲ್ಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಬೆಳಗ್ಗೆ ಸಚಿವ ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.