ರಿಪ್ಪನ್‍ಪೇಟೆ: ಹುಂಚಾಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಯುವಕನೊಬ್ಬ ಬಲಿಯಾಗಿದ್ದಾರೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಯುವಕರಿಗೆ ಸ್ಪೂರ್ತಿಯಾಗಿದ್ದ ಹುಂಚಾ ಗ್ರಾಮದ ಉದಯೋನ್ನುಖ ಕೃಷಿಕ ಭಾನುಪ್ರಕಾಶ(37) ಕೊರೊನಾ ಸೋಂಕಿನಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತರಾಗಿದ್ದಾರೆ.
ಕೃಷಿ ಕಾರ್ಯ ಚಟುವಟಿಕೆಯೊಂದಿಗೆ ಸಮಾಜ ಸೇವೆಯ ಮೂಲಕ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಭಾನು ಪ್ರಕಾಶ್ .ಕೃಷಿ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟಮಾಡಿ ಕೃಷಿಯನ್ನು ಒಂದು ಹೊಸ ಆಯಾಮದಲ್ಲಿ ನೋಡಿದ್ದ , ಜಾತ್ರೆ ಹಾಗೂ ವಿಶೇಷ ದಿನಗಳಲ್ಲಿ ಹುಂಚಾ ಗ್ರಾಮದಲ್ಲಿ ಯಕ್ಷಗಾನ ಪ್ರದರ್ಶನ ಹವ್ಯಾಸಿ ಕಲಾವಿದರಾಗಿದ್ದು. ಕ್ರೀಡೆ ಕಲೆ, ಕೃಷಿಯಲ್ಲಿ ಒಂದು ವಿಶಿಷ್ಟ ಉತ್ಸಾಹ ಹೊಂದಿದ್ದ ಇವರು ಹುಂಚಾ ಗ್ರಾಮದಲ್ಲಿ ಜನ ಸ್ನೇಹಿ ವ್ಯಕ್ತಿಯಾಗಿದ್ದರು, ಮೃತರಿಗೆ ,ತಾಯಿ .ಅಕ್ಕ ಮತ್ತು ಅಣ್ಣಾ ಇದ್ದಾರೆ.
previous post
next post