ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪ್ರಸನ್ನನಾಥ ಸ್ವಾಮೀಜಿಯವರ ಸಹಕಾರದೊಂದಿಗೆ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಮಲ್ಲಿಗೇನಹಳ್ಳಿಯಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ ನೂರಾರು ಬಡ ಕುಟುಂಬಗಳಿಗೆ ಊಟ, ಹಣ್ಣು ಹಂಪಲು ಹಾಗೂ ಕುಡಿಯುವ ನೀರನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಾಂತ್, ಪಾಲಿಕೆ ಸದಸ್ಯರಾದ ರಮೇಶ್‌ಹೆಗ್ಡೆ, ಯಮುನಾರಂಗೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷ ವೇದಾ ವಿಜಯಕುಮಾರ್, ಮಾಜಿ ಮೇಯರ್ ಸುವರ್ಣಶಂಕರ್, ಮುಖಂಡರಾದ ಕೆ.ಎನ್.ರಾಮಕೃಷ್ಣ, ಭಾರತೀ ರಾಮಕೃಷ್ಣ, ಶಾರದಮ್ಮ, ವಕೀಲರಾದ ಕೆ.ಪಿ.ಶ್ರೀಪಾಲ್, ಜಿ.ರಾಘವೇಂದ್ರ, ಯುವ ಮುಖಂಡ ಚೇತನ್‌ಗೌಡ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಪದಾಧಿಕಾರಿಗಳು ಹಾಗೂ ಪ್ರಮುಖರು ಹಾಜರಿದ್ದರು.
previous post
next post