ಶೆಟ್ಟಿಹಳ್ಳಿಯಲ್ಲಿ ಆತಂಕ
ಶಿವಮೊಗ್ಗದಲ್ಲಿ ಕೊರೊನ ಆತಂಕ ಯಥಾಸ್ಥಿತಿ ಯಲ್ಲಿದ್ದು, ಗುರುವಾರ7 ಮಂದಿ ಸೋಂಕಿತರು ನಿಧನರಾಗಿದ್ದಾರೆ. ಒಟ್ಟು ಜನ 847 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 827ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ 755ಕ್ಕೇರಿದೆ. ಶಿವಮೊಗ್ಗ ತಾಲೂಕಿನಲ್ಲಿ 255ಭದ್ರಾವತಿಯಲ್ಲಿ 115, ತೀರ್ಥಹಳ್ಳಿ 79, ಶಿಕಾರಿಪುರ114, ಸಾಗರ 154,ಹೊಸನಗರ ೧೦೪ ಹಾಗೂ ಸೊರಬದಲ್ಲಿ 67, . ಇತರೆ ಜಿಲ್ಲೆಯ37ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 33ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಶೆಟ್ಟಿಹಳ್ಳಿಯಲ್ಲಿ ಮತ್ತೆ 17 ಮಂದಿಗೆ ಸೋಂಕು
ಶಿವಮೊಗ್ಗ ತಾಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಮತ್ತೆ17 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಕಳೆದ ವಾರ19 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದರಿಂದ ಎಲ್ಲರನ್ನೂ ಗಾಜನೂರಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಿ ವಾಪಸ್ ಊರಿಗೆ ಕಳಿಸಲಾಗಿತ್ತು. ಎರಡು ದಿನಗಳ ಹಿಂದೆ ಎರಡನೇ ಹಂತದಲ್ಲಿ ಗ್ರಾಮದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 17ಮಂದಿಯಲ್ಲಿ ಪಾಸಿಟಿವ್ ವರದಿಯಾಗಿದೆ. ಕಗ್ಗಾಡಿನಲ್ಲಿರುವ ಈ ಊರಿಗೂ ಕೊರೊನ ವ್ಯಾಪಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಜನರು ಪರ ಊರುಗಳಲ್ಲಿ ನಡೆದಿದ್ದ ಮದುವೆ ಹಾಗೂ ನಗರ ಪ್ರದೇಶಕ್ಕೆ ಭೇಟಿ ಕೊಟ್ಟು ಬಂದಿರುವುದರಿಂದ ಊರಿಗೆ ಸೋಂಕು ಬಂದಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮದಲ್ಲಿ ಕೊರೊನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಗ್ರಾಮಸ್ಥರಿಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.