Malenadu Mitra
Uncategorized

ನೆಹರು ಸದೃಢ ಭಾರತದ ನಿರ್ಮಾತೃ

ಸ್ವಾತಂತ್ರ್ಯ ಭಾರತವನ್ನು ಸದೃಢ ಭಾರತವನ್ನಾಗಿ ಬೆಳೆಸಿದ ಕೀರ್ತಿ ಮೊದಲ ಪ್ರಧಾನಿ ಜವಹಾರ್‌ಲಾಲ್ ನೆಹರೂ ರವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.
ಗುರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸರಳವಾಗಿ ಆಯೋಜಿಸಿದ್ದ ದಿ. ಜವಹಾರ್‌ಲಾಲ್ ನೆಹರೂ ರವರ ೫೭ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೆಹರೂ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ನೆಹರೂ ರವರು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಅನಂತರ ಅವರು ದೇಶದ ಪ್ರಧಾನಿಯಾಗಿ ಸುಮಾರು ೧೬ ವರ್ಷಗಳ ಕಾಲ ಆಡಳಿತ ನೀಡಿದರು. ಆಗ ತಾನೆ ಸ್ವಾತಂತ್ರ್ಯ ಪಡೆದ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಆರ್ಥಿಕವಾಗಿ ದೇಶವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಮಾಜವಾದ ಜಾತ್ಯಾತೀತ ತತ್ವದ ಮತ್ತು ತಂತ್ರಜ್ಞಾನದ ಆಧುನಿಕತೆಯ ಹರಿಕಾರ ಎಂದು ಪ್ರಶಂಸೆಗೆ ಒಳಗಾದ ನೆಹರೂ ರವರು ಆಧುನಿಕ ಭಾರತದ ಶಿಲ್ಪಿ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾರಂಗೇಗೌಡ, ಸದಸ್ಯ ಹೆಚ್.ಸಿ.ಯೋಗೀಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಮುಖಂಡರಾದ ಕೆ.ರಂಗನಾಥ್, ಎನ್.ಡಿ.ಪ್ರವೀಣ್ ಕುಮಾರ್, ಬಿ.ಲೋಕೇಶ್, ಸತೀಶ್, ರಂಗೇಗೌಡ, ಎಂ.ಶಿವಮೂರ್ತಿ, ಇಕ್ಬಾಲ್ ನೇತಾಜಿ, ಶಶಿಕುಮಾರ್, ಕುಮರೇಶ್, ಜಗತ್ ಇನ್ನಿತರರಿದ್ದರು

Ad Widget

Related posts

ವಿದ್ಯುತ್ ಅವಘಡ : ರೈತ ಸಾವು

Malenadu Mirror Desk

ಮನೆಮನೆಗೆ ಗಂಗೆ ಯೋಜನೆಯಡಿ ಎಲ್ಲ ಹಳ್ಳಿಗಳಿಗೂ ನೀರು: ಸಚಿವ ಕೆ.ಎಸ್. ಈಶ್ವರಪ್ಪ

Malenadu Mirror Desk

ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.