ಶಿವಮೊಗ್ಗ ಜಿಲ್ಲೆಯ ಎರಡು ಹೈ ಪ್ರೊಫೈಲ್ ಮದುವೆಗಳು ಕೋವಿಡ್ ಕಾರಣಕ್ಕೆ ಮುಂದೆ ಹೋಗಿವೆ.
ಮಾಜಿ ಸಚಿವ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿ ಲಾವಣ್ಯ ಅವರ ವಿವಾಹ ಹೈದರಾಬಾದ್ ವೈದ್ಯರೊಂದಿಗೆ ಇದೇ ಮೇ.30 ರಂದು ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಕೋವಿಡ್ ಕಠಿಣ ನಿಯಮಾವಳಿ ಕಾರಣದಿಂದಾಗಿ ಕುಮಾರ ಬಂಗಾರಪ್ಪ ಮಗಳ ಮದುವೆ ಮುಂದೂಡಿದ್ದಾರೆ. ಜೂ.4 ರಂದು ಸೊರಬದ ಎಸ್.ಬಂಗಾರಪ್ಪ ಕ್ರೀಡಾಂಗಣದಲ್ಲಿ ಅದ್ದೂರಿ ಆರತಕ್ಷತೆಯನ್ನೂ ನಿಕ್ಕಿ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಈ ಮದುವೆಯನ್ನು ಅವರು ಮುಂದೂಡಿದ್ದಾರೆ.
ಹಾಲಪ್ಪ ಪುತ್ರಿ ಮದುವೆಯೂ ಮುಂದಕ್ಕೆ
ಹಾಲಿ ಬಿಜೆಪಿ ಶಾಸಕರು ಹಾಗೂ ಎಂ.ಎಸ್.ಐ.ಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅವರ ಪುತ್ರಿಯ ವಿವಾಹ ಮೇ 3 ರಂದು ನಿಗದಿಯಾಗಿತ್ತು. ಲಾಕ್ ಡೌನ್ ಕಾರಣಕ್ಕೆ ಅದನ್ನು ಮುಂದೂಡಲಾಗಿತ್ತು. ಹಾಲಪ್ಪ ಪುತ್ರಿಯ ವಿವಾಹ ಡಾ.ಪಾರ್ವತಮ್ಮ ರಾಜ್‍ಕುಮಾರ್ ಸೋದರಿಯ ಪುತ್ರನೊಂದಿಗೆ ನಡೆಯಬೇಕಿತ್ತು. ಬಂದು ಬಳಗ ಮತ್ತು ಅಭಿಮಾನಿಗಳ ಹಾರೈಕೆಯೊಂದಿಗೆ ಪುತ್ರಿಯ ವಿವಾಹ ಮಾಡಬೇಕೆಂದಿರುವ ಹಾಲಪ್ಪ ಅವರು, ಕೋವಿಡ್ ಮಾರ್ಗಸೂಚಿಯನ್ವಯ ಜನ ಸೇರುವಂತಿಲ್ಲ ಎಂಬ ಕಾರಣಕ್ಕೆ ಮದುವೆ ಮುಂದೂಡಿದ್ದಾರೆ. ಬೆಂಗಳೂರಿನಲ್ಲಿ ಮುಹೂರ್ತ, ಹರತಾಳು ಹಾಗೂ ಹೊಳೆಕೊಪ್ಪದಲ್ಲಿ ಆರತಕ್ಷತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಎರಡೂ ಮದುವೆಗಳಿಗೆ ಬಂಧು ಬಾಂದವರಿಗೆ ಆಹ್ವಾನವನ್ನೂ ನೀಡಲಾಗಿತ್ತು.