ಪ್ರತಿದಿನ 20 ಸಾವಿರ ಪ್ರವಾಸಿಗರ ನಿರೀಕ್ಷೆ
ತಲಕಳಲೆಯಲ್ಲಿ ಜಲಕ್ರೀಡೆ
ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಸೌಂದರ್ಯವನ್ನು ಸರ್ವಋತುಗಳಲ್ಲೂ ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ 160ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಶನಿವಾರ ಮತ್ತು ಭಾನುವಾರ ಹಾಗೂ ಹಬ್ಬ-ಹರಿದಿನಗಳಲ್ಲಿ ಜಲಪಾತ ವೀಕ್ಷಿಸಲು ಅವಕಾಶ ಒದಗಿಸಲಾಗುವುದು. ಈ ಅವಧಿಯಲ್ಲಿ ಜಲಪಾತಕ್ಕೆ ಜಲಾಶಯದ ನೀರನ್ನು ಹರಿಯಬಿಡುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಸುಮಾರು 5ಕೋಟಿ ರೂ.ಗಳ ನಷ್ಟ ಉಂಟಾಗಬಹುದಾಗಿದ್ದು, ಇದನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಭರಿಸುವ ಬಗ್ಗೆ ಕೆ.ಪಿ.ಟಿ.ಸಿ.ಎಲ್.ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜೋಗದ ಸುತ್ತಮುತ್ತಲಲ್ಲಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು, ಈ ಎಲ್ಲಾ ಕಾವiಗಾರಿಗಳು ನಿರೀಕ್ಷಿತ 2ವರ್ಷ ವರ್ಷಗಳ ಅವಧಿಯಲ್ಲಿ ಮುಕ್ತಾಯವಾಗಲಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗಳು ಭರದಿಂದ ಸಾಗಿದೆ. ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ನಂತರ ಸುಮಾರು 20ಸಾವಿರ ಪ್ರವಾಸಿಗರು ಪ್ರತಿದಿನ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದರು
ಸಾಗರ ಸಮೀಪದ ತಲಕಳಲೆ ಸಮೀಪದಲ್ಲಿ ವಾಟರ್ ಸ್ಪೋಟ್ರ್ಸ್‍ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ವ್ಯವಸ್ಥಿತ ನಿರ್ವಹಣೆಗೂ ಕ್ರಮ ವಹಿಸಲಾಗಿದೆ. ಅಲ್ಲದೇ ಶಿವಮೊಗ್ಗ ಸಮೀಪದ ಸಕ್ರೆಬೈಲು, ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ, ನಗರದ ಕೋಟೆ, ಶಿವಪ್ಪನಾಯಕನ ಅರಮನೆ ಮುಂತಾದ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ದೊರೆತು ಜನರ ಜೀವನಮಟ್ಟ ಸುಧಾರಣೆಗೊಳ್ಳಲಿದೆ. ಪರೋಕ್ಷವಾಗಿ ಉದ್ಯೋಗಾವಕಾಶಗಳು ಹೆಚ್ವಲಿವೆ ಎಂದರು.