ಬಡವರಿಗೆ ನೆರವಾಗುವುದೇ ಮಾನವೀಯತೆ ಎಂದು ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್ ಹೇಳಿದರು.
ಶಿವಮೊಗ್ಗ ನಗರದ ಹಳೇಜೈಲು ಆವರಣದಲ್ಲಿ ಪೌರಕಾರ್ಮಿಕರಾದ ಆಟೋ, ಟ್ರಿಪ್ಪರ್, ಲೋಡರ್‍ಸ್, ಡ್ರೈವರ್‍ಸ್‌ಗಳಿಗೆ ಫೇಸ್‌ಶೀಲ್ಡ್, ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ಗ್ಲೋಜ್ ನೀಡಿ ಮಾತನಾಡುತ್ತಿದ್ದರು.
ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಪೌರಕಾರ್ಮಿಕರು ತಮ್ಮ ಕೆಲಸಗಳನ್ನು ಮುಗಿಸಿ ಮನೆಗಳಿಗೆ ಹೋಗುತ್ತಾರೆ. ಮನೆಯ ಸದಸ್ಯರೊಂದಿಗೆ ಇರಬೇಕಾದುದು ಅನಿವಾರ್ಯವಾಗುತ್ತದೆ. ಹಾಗಾಗಿ ಯಾವ ಸೋಂಕು ತಗುಲದಂತೆ ಅವರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಬಡವರಿಗೆ ನೆರವಾಗುವುದೆ ಮಾನವೀಯತೆಯ ಗುಣ ಕೊರೋನಾದಂತಹ ಸಂದರ್ಭದಲ್ಲಿ ಕೋಟಿ ಕೋಟಿ ಇರುವ ಶ್ರೀಮಂತರು ತಮ್ಮ ಕೈಲಾದ ಮಟ್ಟಿಗೆ ಬಡವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ ಅವರು, ಇದೇ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ತಮ್ಮ ಕುಟುಂಬವನ್ನು ನೆನೆದುಕೊಂಡು ಎಚ್ಚರಿಕೆ ವಹಿಸಲಿ ಎಂದರು.
ಸುಮಾರು150 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಉಪಕರಣಗಳನ್ನು ನೀಡಲಾಯಿತು. ಇದಲ್ಲದೆ ಜೊಮೋಟೋದವರಿಗೆ, ಹೋಂ ಗಾರ್ಡ್ಸ್‌ಗಳಿಗೂ ಕೂಡ ನೀಡಲಾಗಿತ್ತು ಹಾಗೂ ಇವರೆಲ್ಲರಿಗೂ ಕೋವಿಶೀಲ್ಡ್ ನೀಡಲು ಕೂಡ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ನಾಗರಾಜ್ ಕಂಕಾರಿ, ಪಾಲಾಕ್ಷಿ, ಬಸವರಾಜ್, ಭಾಸ್ಕರ್, ಪಾಲಿಕೆ ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವರಿದ್ದರು.
previous post