ಶಿವಮೊಗ್ಗದ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಕೇಶವಮೂರ್ತಿ(50) ಬುಧವಾರ ನಿಧನರಾಗಿದ್ದಾರೆ.
ಕೊರೊನ ಸೋಂಕಿಗೆ ತುತ್ತಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಕ್ಸಿಜನ ಪ್ರಮಾಣ ತೀವ್ರ ಕುಸಿತಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ತೀರ್ಥಹಳ್ಳಿ ತಾಲೂಕು ಅರಳಗೋಡು ಸಮೀಪದ ಸುಳಿಬೈಲ್ ನಿವಾಸಿಯಾಗಿದ್ದ ಕೇಶವಮೂರ್ತಿ ಈಡಿಗರ ಸೊಸೈಟಿ ಆರಂಭದಿಂದಲೂ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಸರಳ ಸಜ್ಜನಿಕೆ ಹಾಗೂ ಮೃಧುಬಾಷಿಕತೆಯಿಂದ ಗ್ರಾಹಕರ ಹಾಗೂ ಆಡಳಿತಮಂಡಳಿಯ ಪ್ರೀತಿಗಳಿಸಿದ್ದರು ಮಾತ್ರವಲ್ಲದೆ ಸೊಸೈಟಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸಂತಾಪ:
ಕೇಶವಮೂರ್ತಿ ನಿಧನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಡಾ.ಜಿ.ಡಿನಾರಾಯಣಪ್ಪ, ಉಪಾಧ್ಯಕ್ಷ ರವೀಂದ್ರ ಹಾಗೂ ನಿರ್ದೇಶಕ ಮಂಡಳಿ ಕೇಶವಮೂರ್ತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.
ತುಂಬಾ ಕಷ್ಟದಿಂದ ವಿದ್ಯಾಭ್ಯಾಸ ಮಾಡಿ ಬದುಕು ಕಟ್ಟಿಕೊಂಡಿದ್ದ ಕೇಶವಮೂರ್ತಿ ನಿಧನ ಆಘಾತ ತಂದಿದೆ. ಸಕಾಲದಲ್ಲಿ ಚಿಕಿತ್ಸೆ ಮಾಡಿಸಿದ್ದರೆ ಜೀವ ರಕ್ಷಿಸಿಕೊಳ್ಳಬಹುದಿತ್ತು ಎಂದೆನಿಸತ್ತೆ. ತಮ್ಮ ನಡೆ-ನುಡಿಯಿಂದ ಕೇಶವಮೂರ್ತಿ ಎಲ್ಲರ ಮನಗೆದ್ದಿದ್ದರು. ಅವರ ನಿಧನ ತುಂಬಲಾರದ ನಷ್ಟವಾಗಿದೆ.
–ಜಿ.ಡಿ.ಮಂಜುನಾಥ್, ಕೇಶವಮೂರ್ತಿ ಸಹಪಾಠಿ