ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸುಮಾರು 45 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್‌ನ್ನು ಬಡವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨ನೇ ಕೊರೋನಾ ಅಲೆಯಲ್ಲಿ ಲಾಕ್‌ಡೌನ್ ವಿಧಿಸಿದ್ದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ಅನೇಕ ಬಡವರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ನೆರವಿಗೆ ಬರುವುದು ಪಾಲಿಕೆಯ ಧರ್ಮವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯೂ ಕೂಡ ಸುಮಾರು ೪೫ ಸಾವಿರ ಬಡವರನ್ನು ಗುರುತಿಸಿ ಅವರಿಗೆ ದಿನಸಿ ಕಿಟ್‌ನ್ನು ವಿತರಿಸಲಾಗುವುದು. ಇದಕ್ಕೆ ಈಗಾಗಲೇ ಪಾಲಿಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಿಯಮದಂತೆ ಈ ಬಾರಿಯೂ ಕೂಡ ಕಿಟ್ ನೀಡಲು ಟೆಂಡರ್ ಪ್ರಕ್ರಿಯೆ ಕರೆಯಲಾಗಿದ್ದು, ಅದು ಜೂ.೯ಕ್ಕೆ ಮುಗಿಯಲಿದೆ. ಅನಂತರ ಒಂದೆರೆಡು ದಿನಗಳಲ್ಲಿ ಕಿಟ್ ನೀಡಲು ಆರಂಭಿಸುತ್ತೇವೆ. ಕಳೆದ ಬಾರಿ 40 ಸಾವಿರ ಕಿಟ್ ನೀಡಿದ್ದೆವು. ಈ ಬಾರಿ 45 ಸಾವಿರ ಕಿಟ್ ನೀಡಲಾಗುವುದು ಈಗಾಗಲೇ ಫಲಾನುಭವಿಗಳನ್ನು ಗುರುತಿಸುವ ಕೆಲಸವಾಗಿದೆ. ಕಳೆದ ಬಾರಿ ಗುರುತಿಸಿದವರನ್ನು ಸೇರಿಸಿಕೊಂಡು ಮತ್ತೆ ಹೊಸದಾಗಿ ೫ ಸಾವಿರ ಜನರಿಗೆ ನೀಡಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 25ಸಾವಿರ ಜನರಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸುವ ಚಿಂತನೆ ನಡೆದಿದೆ. ಕೆಲವು ಪ್ರಖ್ಯಾತ ವೈದ್ಯರು ಮತ್ತು ಇತರರ ಸಹಾಯ ಪಡೆದು ಎಲ್ಲರ ನೆರವಿನಿಂದ ಲಸಿಕೆ ಹಾಕಿಸುವ ಆಲೋಚನೆಯಿದೆ ಎಂದ ಅವರು, ಈಗ ಲಸಿಕೆ ಹಾಕಿಸುವ ಕೇಂದ್ರಗಳು ಕಡಿಮೆಯಿದ್ದು, ಅವುಗಳನ್ನು ಕೂಡ ಹೆಚ್ಚಿಸುವ ಪ್ರಯತ್ನ ನಡೆದಿದೆ. ಒಟ್ಟಾರೆ ಕೊರೋನಾದ ಈ ಸಂದರ್ಭದಲ್ಲಿ ಪಾಲಿಕೆ ಎಲ್ಲಾ ರೀತಿಯ ಕ್ರಮಗಳನ್ನು ಮತ್ತು ನೆರವನ್ನು ನೀಡುತ್ತದೆ. ಈ ಬಗ್ಗೆ ಯಾವ ಭಯವೂ ಬೇಡ ಎಂದರು.
ಬಿಜೆಪಿ ನಗರಾಧ್ಯಕ್ಷ ಎನ್.ಜಿ.ಜಗದೀಶ್,ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್‌ಗನ್ನಿ, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್, ಈ.ವಿಶ್ವಾಸ್, ಸುವರ್ಣಶಂಕರ್, ಸುರೇಖಾ ಮುರುಳೀಧರ್, ಧೀರರಾಜ್ ಹೊನ್ನವಿಲೆ, ಕೆ.ಟಿ.ಶ್ರೀನಿವಾಸ್, ಮಾಜಿ ಸದಸ್ಯ ಮೋಹನ್‌ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
previous post